ಬೆಂಗಳೂರು ಬೀದಿಗಳಲ್ಲಿ ತರುಣಿಯರು ಮಾರಾಟಕ್ಕೆ

Prostitution racket in Bangalore
ಬೆಂಗಳೂರು, ಡಿ 21: ಸಿಲಿಕಾನ್ ಸಿಟಿಯಲ್ಲಿ ತರುಣಿಯರು ಮಾರಾಟಕ್ಕಿದ್ದಾರೆ. ಹೊರರಾಜ್ಯಗಳಿಂದ ವ್ಯವಸ್ಥಿತವಾಗಿ ಹುಡುಗಿಯರನ್ನು ಕರೆತಂದು ಮಾರಾಟ ಮಾಡುವ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ ಎನ್ನುವ ನೋವಿನ ವಿಷಯ ಪೋಲೀಸರ ಗಮನಕ್ಕೆ ಇನ್ನೂ ಬರದೇ ಇದ್ದಿದ್ದು ವಿಷಾದನೀಯ.

ಮುಖ್ಯವಾಗಿ ಮುಂಬೈ ಮತ್ತು ಕೋಲ್ಕತ್ತಾ ನಗರಗಳಿಂದ ಹುಡುಗಿಯರನ್ನು ಕರೆತರಲಾಗುತ್ತದೆ. ದಲ್ಲಾಳಿಗಳ ಮೂಲಕ ನಡೆಯುವ ಈ ಮಾಂಸದಂಧೆ ಬೆಂಗಳೂರು ನಗರದ ಕೆಲ ಪ್ರಮುಖ ಬೀದಿ ಮತ್ತು ಸರ್ಕಲ್ ಗಳಲ್ಲಿ ರಾಜಾರೋಷವಾಗಿ ನಡೆಯುತ್ತಿದೆ. ಕೆಲಸ ಅರಸಿ ದೇಶದ ಸಿಲಿಕಾನ್ ಹಬ್ ಗೆ ಬರುವ ಹುಡುಗಿಯರು ವೇಶ್ಯೆಯರಾಗುತ್ತಿರುವುದು ಕಾನೂನು ಸುವ್ಯವಸ್ಥೆಯ ವೈಫಲ್ಯತೆ.

ಸುಮಾರು 25 ರಿಂದ 30 ಸಾವಿರಕ್ಕೆ ಡೀಲ್ ಕುದುರಿಸುವ ದಲ್ಲಾಳಿಗಳು ತರುಣಿಯರನ್ನು ಲಕ್ಷಕ್ಕೂ ಹೆಚ್ಚು ಮೊತ್ತಕ್ಕೆ ನೈಟ್ ಕ್ಲಬ್, ಹೋಟೆಲ್ ಗಳಿಗೆ ಮಾರಾಟ ಮಾಡುತ್ತಾರೆ. ಈ ರೀತಿಯ ಕೆಲ ಅವ್ಯವಹಾರಗಳು ಪೋಲೀಸರ ಗಮನಕ್ಕೂ ಬಂದಿರುತ್ತದೆ ಎನ್ನಲಾಗಿದೆ.

ಪೋಷಕರ ಅನುಮತಿ ಪಡೆದು ಬೇರೆ ರಾಜ್ಯಗಳಿಂದ ಬರುವ ಹುಡುಗಿಯರನ್ನು ದಾರಿತಪ್ಪಿಸಿ ಈ ಜಾಲದಲ್ಲಿ ಸಿಲುಕುವಂತೆ ಮಾಡಲಾಗುತ್ತದೆ. ವೈಯಕ್ತಿಕ ತೊಂದರೆಗಳಿಂದ ನಗರಕ್ಕೆ ಬರುವ ತರುಣಿಯರ ಕೈಗೆ 25 -30 ಸಾವಿರ ಕೊಟ್ಟು ದಲ್ಲಾಳಿ ತನ್ನಲ್ಲಿಂದ ಸಾಗುಹಾಕುತ್ತಾನೆ. ಆದರೆ ಈ ವಿಷಯ ತಿಳಿಯದ ಹೆಚ್ಚಿನ ತರುಣಿಯರಿಗೆ ತನ್ನನ್ನು ಖರೀದಿಸಿದ ಮಾಲೀಕನ ಮುಂದಿನ ನಡೆಯಿಂದಲೇ ತಾನು ಮೋಸ ಹೋದೆ ಎಂದು ಅರಿವಾಗುವುವುದು. [ವೇಶ್ಯಾವಾಟಿಕೆ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+