ಲೈಲಾ ನಾಪತ್ತೆಯಲ್ಲ ಕೊಲೆಯಾಗಿದ್ದಾಳೆ: ನಟಿ ತಂದೆ
ಮುಂಬೈ,
ಡಿ.20: ಪಾಕಿಸ್ತಾನ ಮೂಲದ ಬಾಲಿವುಡ್ ನಟಿ ಲೈಲಾ ಖಾನ್ ಬರೀ ನಾಪತ್ತೆಯಾಗಿಲ್ಲ, ಕೊಲೆಯಾಗಿದೆ ಎಂದು ಆಕೆ ತಂದೆ ನದೀರ್ ಶಾ ದೂರಿದ್ದಾನೆ. ಲೈಲಾ ಖಾನ್ ಸ್ಥಿರಾಸ್ಥಿ ಮೇಲೆ ಕಣ್ಣು ಹಾಕಿದ ಮುಂಬೈ ಮಂದಿ ಲೈಲಾ ಸೇರಿದಂತೆ ನನ್ನ ಕುಟುಂಬವನ್ನು ನಿರ್ನಾಮ ಮಾಡಿದ್ದಾರೆ ಎಂದು ಶಾ ಗೋಳಿಟ್ಟಿದ್ದಾನೆ. id="toptextpromo">ನನ್ನ
ಮಗಳು, ಮಗ ಹಾಗೂ ಪತ್ನಿ ಹುಡುಕಿಕೊಡುವಲ್ಲಿ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ. ಲೈಲಾ ಖಾನ್ ಸಹಚರ ಆಸೀಫ್ ಶೇಖ್ ಮೇಲೆ ಹೆಚ್ಚಿನ ಅನುಮಾನ ಇದೆ. ಲೈಲಾ ನಾಪತ್ತೆಯಲ್ಲಿ ಅವನ ಕೈವಾಡ ಇದ್ದು, ಲೈಲಾ ಒಡವೆಗಳನ್ನು ಕದ್ದು, ಅಪಾರ್ಟ್ಮೆಂಟ್ ಗೆ ಬೆಂಕಿ ಹಚ್ಚಲಾಗಿದೆ. id='are-slot-1' class='oiad oi-axt oiadv'> id='top-searched-articles'>ಲೈಲಾ
ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ನ್ಯಾಯ ಕೊಡಿಸಬೇಕು ಎಂದು ಶಾ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾನೆ. ಜನವರಿಯಲ್ಲಿ ನಾಪತ್ತೆಯಾದ ಲೈಲಾ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಶ್ರೀನಗರದಲ್ಲಿ ಲೈಲಾಳ ಕಾರು ಪತ್ತೆಯಾಗಿತ್ತು. ಆದರೆ, ಮುಂದೆಯಾವುದೇ ಮಾಹಿತಿ ಪೊಲೀಸರಿಗೆ ಲಭ್ಯವಾಗಿಲ್ಲ.












Click it and Unblock the Notifications