ಭೂಕಂಪ ಸುದ್ದಿ ಕೆಳಗೆ ತಳ್ಳಿದ ಭಯೋತ್ಪಾದಕ ಲಾಡೆನ್
ನ್ಯೂಯಾರ್ಕ್,
ಡಿ.19: ಜಗತ್ತನ್ನು ನಡುಗಿಸಿದ ಭಯೋತ್ಪಾದಕ ಅಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಹತ್ಯೆ ಸುದ್ದಿ 2011ರ ಟಾಪ್ ಸುದ್ದಿಯಾಗಿ ಆಯ್ಕೆಯಾಗಿದೆ. ಅಸೋಸಿಯೇಟೆಡ್ ಪ್ರೆಸ್ ನಡೆಸಿದ ಸಮೀಕ್ಷೆಯಲ್ಲಿ ಲಾಡೆನ್ ಹತ್ಯೆ ಸುದ್ದಿ ಹೆಚ್ಚು ವೀಕ್ಷಿಸಿದ ಸುದ್ದಿಯಾಗಿ ಆಯ್ಕೆಯಾಗಿದೆ. id="toptextpromo">ಜಪಾನಿನಲ್ಲಿ
ನಡೆದ ಮಾರ್ಚ್ 11 ರಂದು ನಡೆದ ಭೂಕಂಪ, ಸುನಾಮಿ ಸುದ್ದಿ ಎರಡನೇ ಸ್ಥಾನ ಪಡೆದಿದೆ. ಟಾಪ್ 10 ಸುದ್ದಿಗಳ ಆಯ್ಕೆಯಲ್ಲಿ ಭಾಗವಹಿಸಿದ್ದ ಅಮೆರಿಕದ ಸಂಪಾದಕರು ಹಾಗೂ ಸುದ್ದಿ ವಿಶ್ಲೇಷಕರು ಬಿನ್ ಲಾಡೆನ್ ಪರ 128 ಮತ ಹಾಕಿದ್ದಾರೆ. id='are-slot-1' class='oiad oi-axt oiadv'> id='top-searched-articles'>247
ಮತಗಳಲ್ಲಿ ಜಪಾನ್ ನೈಸರ್ಗಿಕ ವಿಕೋಪದ ಸುದ್ದಿಗೆ 60 ಮತಗಳು ಮಾತ್ರ ಬಂದಿದೆ. ನಂತರದ ಸ್ಥಾನದಲ್ಲಿ ಉತ್ತರ ಆಫ್ರಿಕಾ, ಅರಬ್ ದೇಶಗಳ ಸುದ್ದಿಗಳು ಸೇರಿದೆ. ಅಮೆರಿಕದ ಆರ್ಥಿಕ ಕುಸಿತ, ಬರಾಕ್ ಒಬಾಮಾ ಆರೋಗ್ಯ ಸುಧಾರಣೆ, ಯುಎಸ್ ಚುನಾವಣೆ ಕೂಡಾ ಪಟ್ಟಿಯಲ್ಲಿದೆ.











Click it and Unblock the Notifications