ಐಸಿಐಸಿಐ ಬ್ಯಾಂಕಿನಲ್ಲಿ 1 ಲಕ್ಷ ರು. ಖೋಟಾ ನೋಟು ಪತ್ತೆ

ಮಹಾನಗರದ ಡೋಂಬಿವ್ಲಿಯಲ್ಲಿರುವ ಐಸಿಐಸಿಐ ಬ್ಯಾಂಕ್ ಶಾಖೆಯ ಮ್ಯಾನೇಜರ್ ತಮ್ಮ ಬ್ಯಾಂಕಿನಲ್ಲಿ 1,38,200 ಖೋಟಾ ನೋಟುಗಳು ಪತ್ತೆಯಾಗಿವೆ ಡಿ. 16ರಂದು ಮನಪಾಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಖಾತೆದಾರರೊಬ್ಬರು ಈ ಹಣವನ್ನು ಬ್ಯಾಂಕಿಗೆ ಜಮೆ ಮಾಡಿದ್ದಾರೆ. ಆದರೆ ಅವರ ಗುರುತು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ದಿನದ ವಹಿವಾಟು ಮುಗಿದ ಬಳಿಕ ಶಾಖೆಯ ನೆಲಮಾಳಿಗೆಯಲ್ಲಿರುವ ಭದ್ರತಾ ಕೊಠಡಿಯಲ್ಲಿ ತಪಾಸಣೆ ನಡೆಸುವಾಗ ಈ ನಕಲಿ ನೋಟು ಬೆಳಕಿಗೆ ಬಂತು. ಈ ಹಿಂದೆಯೂ ಬ್ಯಾಂಕಿಗೆ ನಕಲಿ ನೋಟುಗಳ ಜಮಾವಣೆಯಾಗಿತ್ತು. ಆದರೆ ಇಷ್ಟೊಂದು ಭಾರಿ ಮೊತ್ತದ ನೋಟುಗಳು ಇರಲಿಲ್ಲ ಎಂದು ಮ್ಯಾನೇಜರ್ ಅಲವತ್ತುಕೊಂಡಿದ್ದಾರೆ.
ಅಂದಹಾಗೆ, ರೂ. 1,000 ಮುಖಬೆಲೆಯ (54 ನೋಟುಗಳು), ರೂ. 500 (165 ನೋಟುಗಳು), ರೂ. 100 (14 ನೋಟುಗಳು) ಮತ್ತು ರೂ. 50 (14 ನೋಟುಗಳು) ಪತ್ತೆಯಾಗಿವೆ.
ನಕಲಿ ನೋಟು ಪತ್ತೆಯಾಗುತ್ತಿದ್ದಂತೆ ಅವುಗಳನ್ನು ಚಲಾವಣೆಗೆ ಬಿಡದೆ, ಪೊಲೀಸರಿಗೆ ಒಪ್ಪಿಸುತ್ತೇವೆ. ಅದಕ್ಕೂ ಮುನ್ನ ತೀವ್ರ ತಪಾಸಣೆ ನಡೆಸುತ್ತೇವೆ. ಇದನ್ನು ಆರ್ ಬಿಐ ಗಮನಕ್ಕೆ ತರುತ್ತೇವೆ. ಜತೆಗೆ, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋ ಗಮನಕ್ಕ ತರುತ್ತೇವೆ' ಎಂದು ಐಸಿಐಸಿಐ ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications