ಪಾಲಿಶ್ ನೆಪದಲ್ಲಿ 132 ಗ್ರಾಂ ಚಿನ್ನ ದೋಚಿದ ಕಳ್ಳರು

Jewel theft in Holalkere
ಹೊಳಲ್ಕೆರೆ, ಡಿ.17 : ಬಂಗಾರದ ಒಡವೆಗಳನ್ನು ಪಾಲಿಶ್ ಮಾಡಿ ಕೊಡುವ ನೆಪದಲ್ಲಿ ಮಹಿಳೆಯೊಬ್ಬರಿಗೆ ಇಬ್ಬರು ಅಪರಿಚಿತ ಆಸಾಮಿಗಳು ಮೋಸ ಮಾಡಿ ಒಡವೆಗಳನ್ನು ಅಪಹರಿಸಿರುವ ಘಟನೆ ಪಟ್ಟಣದ ಹೊರಕೆರೆ ದೇವಪುರದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ. ವಿಶಾಲಾಕ್ಷಮ್ಮ ಎಂಬ ಮಹಿಳೆಯೇ ತಮ್ಮ ಬಂಗಾರದ ಒಡವೆಗಳನ್ನು ಕಳೆದುಕೊಂಡ ದುರ್ದೈವಿ.

ವಿಶಾಲಾಕ್ಷಮ್ಮ ಮನೆಯಲ್ಲಿ ಇದ್ದಾಗ ಸುಮಾರು 30 ವರ್ಷ ವಯಸ್ಸಿನ ಇಬ್ಬರು ಯುವಕರು ಬಂದು ಬೆಳ್ಳಿ ಬಂಗಾರ ಪಾಲಿಶ್ ಮಾಡುತ್ತೇವೆಂದು ಹೇಳಿದ್ದಾರೆ. ವಿಶಾಲಾಕ್ಷಮ್ಮ ಹೌದೇ ಎಂದು ಊರಗಲ ಕಣ್ಣರಳಿಸಿ ಒಂದ್ನಿಮಿಷ ಇರಿ ಬರ್ತೀರಿ, ಒಡವೆ ಎಲ್ಲಾ ತಂದುಕೊಡ್ತೀನಿ ಎಂದು ಹೇಳಿ, 4 ಬಂಗಾರ ಬಳೆಗಳು, 3 ಬಂಗಾರದ ಸರಗಳು, 4 ಬಂಗಾರದ ಉಂಗುರಗಳನ್ನು ತಂದು ಕೊಟ್ಟಿದ್ದಾರೆ.

ಮಿಕ ಬಲೆಗೆ ಬಿದ್ದದ್ದನ್ನು ಒಳಗೊಳಗೆ ಸಂತಸ ಪಟ್ಟ ಆಸಾಮಿಗಳು ಕುಕ್ಕರ್ ತರಿಸಿಕೊಡಲು ಹೇಳಿದ್ದಾರೆ. ಬಂಗಾರದ ಒಡವೆಗಳಿಗೆ ಅರಿಶಿನಪುಡಿ ಹಾಕಿ 20 ನಿಮಿಷ ಕುದಿಸಿ ನಂತರ ಒಡವೆಗಳನ್ನು ತೆಗೆಯಿರಿ ಎಂದು ಹೇಳಿ ಹೋಗಿದ್ದಾರೆ. ವಿಶಾಲಾಕ್ಷಮ್ಮನವರು ಕುತೂಹಲ ತಡೆಯಲಾರದೆ 10 ನಿಮಿಷದ ನಂತರ ಕುಕ್ಕರ್ ನೋಡಲಾಗಿ ಬಂಗಾರದ ಒಡವೆಗಳು ಮಾಯವಾಗಿದ್ದನ್ನು ಮನಗಂಡು ಹೌಹಾರಿದ್ದಾರೆ.

ಪಾಲಿಷ್ ನೆಪದಲ್ಲಿ ಆಸಾಮಿಗಳು ಮೋಸ ಮಾಡಿ ಸುಮಾರು 132 ಗ್ರಾಂ ತೂಕದ ಸುಮಾರು ರು. 3,25, 000 ಮೌಲ್ಯದ ಬಂಗಾರದ ಒಡವೆಗಳನ್ನು ಅಪಹರಿಸಿದ್ದಾರೆ ಎಂದು ವಿಶಾಲಾಕ್ಷಮ್ಮ ದೂರು ನೀಡಿದ ಮೇರೆಗೆ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ. (ಒನ್‌ಇಂಡಿಯಾ ಕನ್ನಡ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+