ಮೇಲ್ಮನೆ ಚುನಾವಣೆ: ಯಡ್ಡಿ ಉಪಕೃತ ಡಿಕೆಶಿ ಮತ ಯಾರಿಗೆ?

ತಾವು ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದಾಗ ಯಾರೆಲ್ಲ ತಮ್ಮಿಂದ ಉಪಕೃತರಾಗಿದ್ದಾರೆ. ಯಾವೆಲ್ಲ ಶಾಸಕರು ತಮ್ಮ ಋಣದಲ್ಲಿದ್ದಾರೆ ಎಂಬುದರ ಲೆಕ್ಕಾಚಾರ ಹಾಕುತ್ತಿದ್ದಾರೆ. ಹೀಗೆ ಯಡಿಯೂರಪ್ಪ ಅವರು ಲೆಕ್ಕ ಹಾಕುತ್ತಿರುವ ಕಾಲಕ್ಕೆ ಅನೇಕ ಶಾಸಕರು, ಧೀಮಂತ ನಾಯಕರು ಅವರ ಕಣ್ಮುಂದೆ ಹಾದುಹೋಗಿದ್ದಾರೆ. 'ಇವ ನಮ್ಮವ, ಇವ ನಮ್ಮವ' ಎಂದು ಇವರೆಲ್ಲ ಸದಾನಂದಗೌಡರನ್ನು ಅಪ್ಪಿಕೊಂಡು ಋಣ ಸಂದಾಯ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಇದರಿಂದ ಯಡಿಯೂರಪ್ಪ ತುಂಟ ನಗೆ ನಕ್ಕಿದ್ದಾರೆ.
ಮಾಜಿ ಮಂತ್ರಿ, ಹಾಲಿ ಕಾಂಗ್ರೆಸ್ ಶಾಸಕ ಡಿಕೆ ಶಿವಕುಮಾರ್ ಅವರು ಯಡಿಯೂರಪ್ಪ ಅವರಿಂದ ಹೇಗೆಲ್ಲ ಉಪಕೃತರಾಗಿದ್ದಾರೆ ಎಂಬುದು ಇತ್ತೀಚೆಗಷ್ಟೇ ಜಗಜ್ಜಾಹೀರಾಗಿದೆ. ಅಂತಹುದರಲ್ಲಿ ಡಿಕೆ ಶಿವಕುಮಾರ್ ಮತ ಯಾರಿಗೆ ಎಂದು ಪ್ರತ್ಯೇಕವಾಗಿ ಇಲ್ಲಿ ಕೇಳುವ ಅಗತ್ಯವಿಲ್ಲ. ಇನ್ನು, ಸನ್ಮಾನ್ಯ ಮಾಜಿ ಪ್ರಧಾನಿ ದೇವೇಗೌಡರು. ಅವರು ಪ್ರಧಾನಿಯಾಗುವ ಕಾಲಕ್ಕೆ ಬಿಜೆಪಿ ಏನೆಲ್ಲ ಸಹಾಯ ಮಾಡಿತ್ತು ಎಂಬುದನ್ನು ಮೊನ್ನೆ ಖುದ್ದಾಗಿ ಅವರ ಮನೆಗೇ ಹೋಗಿ ಜ್ಞಾಪಿಸಿಕೊಡಲಾಗಿದೆ.
ಮುಖ್ಯವಾಗಿ ಅಡ್ಡ ಮಾರ್ಗಕ್ಕೆ (ಅಡ್ಡ ಮತದಾನಕ್ಕೆ) ಇಲ್ಲಿ ಸದವಕಾಶವಿದೆ. ಸೋ, ಬಿಜೆಪಿ ಮತ್ತು ಯಡಿಯೂರಪ್ಪ ಉಪಕೃತ ಡಿಕೆಶಿ ವಗೈರೆಗಳ ಮತ ಯಾರಿಗೆ ಎಂಬುದು ದೊಡ್ಡ ಗುಟ್ಟೇನೂ ಅಲ್ಲ. ಅಲ್ಲಿಗೆ ಸದಾನಂದಗೌಡರ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ ಸರ್ವಜ್ಞ.












Click it and Unblock the Notifications