ಡಿವಿಎಸ್ ಗೆಲುವಿಗೆ ಹತ್ತಿರ: ಕಾಂಗ್ರೆಸ್ಸಿಗೆ ರಿಮೋಟ್ ಚಾನ್ಸ್

ವಿಧಾನಸಭೆಯಲ್ಲಿ ಸ್ಪೀಕರ್ ಹಾಗೂ ನಾಮ ನಿರ್ದೇಶಿತ ಸದಸ್ಯ ಸೇರಿದಂತೆ 122 ಶಾಸಕರ ಬಲ ಹೊಂದಿರುವ ಬಿಜೆಪಿಯ ಅಭ್ಯರ್ಥಿಯನ್ನು ಮಣಿಸಬೇಕಾದರೆ 10ಕ್ಕಿಂತ ಹೆಚ್ಚಿನ ಬಿಜೆಪಿ ಸದಸ್ಯರು ಅಡ್ಡ ಮತದಾನ ಮಾಡಬೇಕು. ಇಲ್ಲವೇ 20ಕ್ಕೂ ಹೆಚ್ಚು ಬಿಜೆಪಿ ಶಾಸಕರು ತಟಸ್ಥರಾಗಿ ಉಳಿಯಬೇಕು. ಹೀಗಾದಾಗ ಮಾತ್ರ ಕಾಂಗ್ರೆಸ್ ಅಭ್ಯರ್ಥಿ (ಆನಂದ್ ಗಡ್ಡದೇವರ ಮಠ) ಗೆಲ್ಲಬಹುದು.
ವಿಧಾನಸಬೆಯಲ್ಲಿ ಕಾಂಗ್ರೆಸ್ಸಿನ ಬಲ 71, ಜೆಡಿಎಸ್ 26, ಪಕ್ಷೇತರರು (ಶ್ರೀರಾಮುಲು ಸೇರಿದಂತೆ) 6 ಮಂದಿ ಇದ್ದಾರೆ. ಈ ಮೂರೂ ಬಲಗಳು ಒಂದಾದರೆ ಪ್ರತಿಪಕ್ಷಗಳ ಸಂಖ್ಯೆ 103 ಆಗುತ್ತದೆ. ಇನ್ನು, ಬಿಜೆಪಿ ಬಲ 121. ಜತೆಗೆ, ಫಲಿತಾಂಶ ಟೈ ಆದರೆ ಸ್ಪೀಕರ್ ಮತ ಆಡಳಿತಾರೂಢ ಪಕ್ಷದ ನೆರವಿಗೆ ಧಾವಿಸಬಹುದು.
ಹೀಗಾಗಿ, ಕಾಂಗ್ರೆಸ್ ಚುನಾವಣೆಯಲ್ಲಿ ಗೆಲ್ಲಬೇಕಾದರೆ ಮೊದಲು ಜೆಡಿಎಸ್ ಮತ್ತು ಪಕ್ಷೇತರರ ಬೆಂಬಲದ ಖಾತ್ರಿ ಪಡೆಯಬೇಕು. ಆನಂತರ ಬಿಜೆಪಿಯ 10 ಶಾಸಕರು ಕಾಂಗ್ರೆಸ್ ಪರ ಕ್ರಾಸ್ ವೋಟಿಂಗ್ ಮಾಡುವಂತೆ ನೋಡಿಕೊಳ್ಳಬೇಕು. ಹೀಗಾದಾಗ ಬಿಜೆಪಿಗೆ 101 ಮತಗಳು, ಕಾಂಗ್ರೆಸ್ ಅಭ್ಯರ್ಥಿಗೆ 113 ಮತಗಳು ಬೀಳುತ್ತವೆ. ಆದರೆ ಅದು ತುಂಬಾ ರಿಮೋಟ್ ಛಾನ್ಸ್.












Click it and Unblock the Notifications