ವರಸೆ ಬದಲಿಸಿದ ಶ್ರೀರಾಮುಲು ಅಚ್ಚರಿಯ ಮಾತುಗಳು

ಇದೇ ವೇಳೆ. ತಮ್ಮ ಜೊತೆ ಯಾವ ಶಾಸಕರೂ ಇಲ್ಲ ಎಂಬ ಈಶ್ವರಪ್ಪ ಹೇಳಿಕೆಗೆ ಕಿಡಿ ಕಾರಿದ ರಾಮುಲು ನನ್ನ ಜೊತೆ 22ಕ್ಕೂ ಹೆಚ್ಚು ಶಾಸಕರಿದ್ದಾರೆ ಎಂದು ಪುನರುಚ್ಛರಿಸಿದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಶಾಸಕರು ವಿಪ್ ಉಲ್ಲಂಘಿಸುವುದಿಲ್ಲ. ಮುಖ್ಯಮಂತ್ರಿ ಸದಾನಂದಗೌಡಗೆ ನನ್ನ ಬೆಂಬಲಿಗ ಶಾಸಕರು ಮತ ಚಲಾಯಿಸುವರು ಎಂದು ಹೇಳಿ ಅಚ್ಚರಿ ಮೂಡಿಸಿದರು.
ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಶ್ನೆಯೇ ಇಲ್ಲ. ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ನಾನು ಯಾವ ಶಾಸಕರಿಗೂ ಪಕ್ಷದ ವಿಪ್‌ನ್ನು ಉಲ್ಲಂಘಿಸಿ ಇಂತವರಿಗೆ ಮತ ನೀಡಿ ಎಂದು ಹೇಳುವುದಿಲ್ಲ. ಅವರು ಪಕ್ಷದ ಜತೆಗೆ ಇರುತ್ತಾರೆ ಎಂದರು.












Click it and Unblock the Notifications