ನಾನು ಸತ್ಯಹರಿಶ್ಚಂದ್ರ ಅಲ್ಲ: ಶ್ರೀರಾಮುಲುಗೆ ಜ್ಞಾನೋದಯ

no-am-not-satya-harishchandra-sreeramulu
ಬಳ್ಳಾರಿ, ಡಿ.11: ಒಟ್ಟಿನಲ್ಲಿ ಅಚ್ಚರಿಯ ಮೂಟೆಯಾಗಿರುವ ಶ್ರೀರಾಮುಲು ಶನಿವಾರ ತಮ್ಮ ವರಸೆ ಬದಲಿದ್ದು, ರಾಜಕೀಯ ವಾಸ್ತವವನ್ನು ಆಲಂಗಿಸಿಕೊಂಡಂತಿದೆ. 'ರಾಜಕೀಯದಲ್ಲಿ ಯಾರು ಸತ್ಯವಂತರಲ್ಲ, ಹಾಗಂತ ನಾನು ಕೂಡ ಸತ್ಯವಂತನಲ್ಲ. ಇಲ್ಲಿ ಯಾರು ಶತ್ರುಗಳಲ್ಲ, ಯಾರೂ ಮಿತ್ರರಲ್ಲ. ರಾಜಕೀಯದಲ್ಲಿ ಹೊಂದಾಣಿಕೆ ಅನಿವಾರ್ಯ' ಎಂದು ತಮ್ಮ ರಾಜಕೀಯ ನಡೆಯ ಬಗ್ಗೆ ತೀವ್ರ ಕುತೂಹಲ ಮೂಡಿಸಿದ್ದಾರೆ.

ಆದರೆ ಯಾಕೋ, ಏನೋ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್‌. ಈಶ್ವರಪ್ಪ ಅವರು ಮಾತ್ರ ರಾಮುಲುಗೆ ಬೇಡವಾದ ವ್ಯಕ್ತಿಯಾಗಿದ್ದಾರೆ. ಈಶ್ವರಪ್ಪ ತಮಗಷ್ಟೇ ಅಲ್ಲ ಬಿಜೆಪಿಯಲ್ಲೂ ಯಾರಿಗೂ ಬೇಡವಾದ ವ್ಯಕ್ತಿಯಾಗಿದ್ದು, ಜಗಳಗಂಟ ರಾಜಕಾರಣಿ ಎಂದು ಶ್ರೀರಾಮುಲು ಟೀಕಿಸಿದ್ದಾರೆ.

ಈಶ್ವರಪ್ಪ ಪ್ರತಿಪಕ್ಷದ ನಾಯಕರಂತೆ ವರ್ತಿಸುವ ಮೂಲಕ ವಿಧಾನಸಭೆ ಅಧಿವೇಶನದ ಸಮಯವನ್ನು ಹಾಳು ಮಾಡುತ್ತಿದ್ದಾರೆ, ಅವರ ಬಗ್ಗೆ ಮಾತನಾಡಿದರೆ ಕೆಸರಿನ ಮೇಲೆ ಕಲ್ಲೆಸೆದು ಮುಖಕ್ಕೆ ಎರಚಿಕೊಂಡಂತೆ ಎಂದು ರಾಮುಲು ವ್ಯಂಗ್ಯವಾಡಿದರು.

ಆಂಧ್ರದ ವೈಎಸ್‌ಆರ್ ಕಾಂಗ್ರೆಸ್‌ ಮಾದರಿಯ ಪಕ್ಷವನ್ನು ರಾಜ್ಯದಲ್ಲಿ ಹುಟ್ಟು ಹಾಕಲಿದ್ದೇನೆ. ಅಧಿವೇಶನ ಮುಗಿದ ಬಳಿಕ ರಾಜ್ಯದ 224 ವಿಧಾನ ಸಭಾ ಕ್ಷೇತ್ರದಲ್ಲಿ ಪ್ರವಾಸ ಮಾಡುವುದಾಗಿ ರಾಮುಲು ಇದೇ ವೇಳೆ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+