ಬಸವನಗುಡಿಯ ಹೆಗ್ಗಳಿಕೆ: ಇಲ್ಲಿ ಒಂದೂ ಮಟನ್ ಸ್ಟಾಲ್ ಇಲ್ಲ!

basavangudi-has-no-mutton-stall-bbmp
ಬೆಂಗಳೂರು, ಡಿ.9: ರಾಜಧಾನಿ ಬೆಂಗಳೂರಿನಲ್ಲಿ ಬಸವನಗುಡಿ ಅನೇಕ ವೈಶಿಷ್ಯಗಳ ತವೂರು. ಅದರಲ್ಲೂ ಹಿಂದಿನ ತಲೆಮಾರಿನ ಜನ ಬಸವನಗುಡಿಯ ಅಹ್ಲಾದಕರ ವಾತಾವರಣಕ್ಕೆ ಅಕ್ಷರಶಃ ಮನಸೋಲುತ್ತಿದ್ದರು. ತಾನು ಬಸವನಗುಡಿಯವ ಅನ್ನಿಸಿಕೊಳ್ಳುವುದು ಹೆಮ್ಮೆ, ಪ್ರತಿಷ್ಠೆಯ ವಿಷಯವಾಗಿತ್ತು.

ಕುತೂಹಲದ ಸಂಗತಿಯೆಂದರೆ, ಇಂತಹ ಬಸವನಗುಡಿ ಇಂದಿಗೂ ಹಾಗೆಯೇ ಇದೆಯಾದರೂ ಸ್ವಲ್ಪಮಟ್ಟಿಗೆ commercial ಆಗಿ ವಾತಾವರಣ ಹದಗೆಟ್ಟಿರುವುದು ಸತ್ಯ ಸಂಗತಿ. ಆದರೂ ಅದು ಬಸವನಗುಡಿಯೇ. ಇಂತಹ ಬಸವನಗುಡಿ ಇನ್ನೂ ಒಂದು ಹೆಗ್ಗಳಿಕೆ ಇದೆ. ಏನಪಾ ಅಂದರೆ ಇಲ್ಲಿ ಒಂದೂ ಮಟನ್ ಸ್ಟಾಲ್ ಇಲ್ಲ. ಹೌದು ಇದು ನಿಜ. ಬಸವನಗುಡಿ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಇಲ್ಲಿ ಒಂದೂ ಮಟನ್ ಅಂಗಡಿ ತಲೆಯೆತ್ತಿಲ್ಲ.

ಆದರೆ ಇದರ ಗಡಿ ದಾಟುತ್ತಿದ್ದಂತೆ ಪೂರ್ವ ಭಾಗದಲ್ಲಿ ಪಟಾಲಮ್ಮ ಸ್ಟ್ರೀಟ್ ಆಚೆಗೆ ಅದರದೇ ಅದ ಕಾರಣಗಳಿಗೆ ಮಟನ್ ಸ್ಟಾಲುಗಳು ಇರುವುದು ಸತ್ಯ ಸಂಗತಿ. ಏನೇ ಆಗಲಿ ಇಡೀ ರಾಜಧಾನಿಯಲ್ಲಿ ಅದ ಮಟನ್ ಸ್ಟಾಲ್ ಇಲ್ಲದ ವಾರ್ಡ್ ಅಂದರೆ ಅದು ಬಸವನಗುಡಿ ಒಂದೇ ಎಂಬುದು ಬಿಬಿಎಂಪಿಗೂ ಹೆಮ್ಮೆಯ ಸಂಗತಿ.

ಈ ಪರಂಪರೆ ಹೀಗೇ ಮುಂದುವರಿಯಲಿ ಎಂಬುದು ಬಸವನಗುಡಿ ಮಂದಿಯ ಒತ್ತಾಸೆ. ಅಷ್ಟರ ಮಟ್ಟಿಗೆ ಈ ಭಾಗದ ಸ್ವಾಸ್ಥ್ಯ ಕಾಪಾಡಿಕೊಳ್ಳೋಣ ಹೊಣೆಗಾರಿಕೆಯೂ ಇದೆ. ಇಂತಹ ಹೆಗ್ಗಳಿಕೆ ಸಮೀಪದ ಜೆಪಿ ನಗರಕ್ಕೂ ಸಲ್ಲುತ್ತದೆ ಎಂಬ ಮಾತಿದೆಯಾದರೂ ಅಲ್ಲಿ ಅಲ್ಲೊಂದು ಇಲ್ಲೊಂದು ಮಟನ್ ಸ್ಟಾಲ್ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+