ಸೋನಿಯಾಜಿಗೆ ಬರ್ಥ್ ಡೇ ಗಿಫ್ಟ್, ಪ್ರೊಫೈಲ್ ಪುಟದಲ್ಲಿ ಪೋರ್ನ್

ಇಂಥದ್ದೊಂದು ಹುಟ್ಟುಹಬ್ಬದ ಉಡುಗೊರೆಯನ್ನು ಪಾಕ್ ಮೂಲದ ಹ್ಯಾಕರ್ ಗಳು ಸೋನಿಯಾಜಿಗೆ ನೀಡಿದ್ದಾರೆ. ಕಾಕತಾಳೀಯವಾಗಿ ಇಂಟರ್ ನೆಟ್ ಮೇಲೆ ನಿರ್ಬಂಧ ಹೇರಲು ಕೇಂದ್ರ ಸರ್ಕಾರ ಮುಂದಾಗಿರುವ ಬೆನ್ನಲ್ಲೇ ಈ ರೀತಿ ಒಂದು ಪ್ರಸಂಗ ಕಾಂಗ್ರೆಸ್ ಪಕ್ಷ ಎದುರಿಸಬೇಕಾಗಿದೆ.
ಕಾಂಗ್ರೆಸ್ ನ ಅಧಿಕೃತ ತಾಣ ಈಗ ವೀಕ್ಷಣೆಗೆ ಲಭ್ಯವಾಗಿದೆ.'One of the things we are most proud of in India is our democracy...[..]' ಎಂಬ ಅರಿಕೆ ಸಂದೇಶದೊಂದಿಗೆ ಸೋನಿಯಾಜೀ ನಗುಮೊಗ ನಿಮ್ಮನ್ನು ಸ್ವಾಗತಿಸುತ್ತದೆ.
ಕಾಂಗ್ರೆಸ್ ನಾಯಕರ ನಗ್ನ ಚಿತ್ರಗಳು, ಕೊಳಕು ಸಂದೇಶಗಳನ್ನು ಒಳಗೊಂಡಿದ್ದ ಸಂದೇಶಗಳು ಕಾಂಗ್ರೆಸ್ ಪುಟದಲ್ಲಿ ಕಾಣಿಸಿಕೊಂಡಿದ್ದು ನಿಜ. ಪಾಕ್ ಮೂಲ ಇಮೇಲ್ ಅಡ್ರೆಸ್ ಗೆ ಸಂದೇಶ ರವಾನೆ ಯಾಗುವಂತೆ ಮಾಡಲಾಗಿದೆ. ಯಾರು ಹ್ಯಾಕ್ ಮಾಡಿದ್ದು ಎಂದು ಇನ್ನು ಸ್ಪಷ್ಟವಾಗಿ ತಿಳಿದಿಲ್ಲ ಎಂದು ಕಾಂಗ್ರೆಸ್ ವಕ್ತಾರ ಟಾಮ್ ವಡಖಾನ್ ಹೇಳಿದ್ದಾರೆ.
ಈ ಮುಂಚೆ ಪಾಕಿಸ್ತಾನ್ ಸೈಬರ್ ಆರ್ಮಿ ಹ್ಯಾಕರ್ ಗಳು ಭಾರತದ ಸಿಬಿಐ ವೆಬ್ ಸೈಟ್ ಅನ್ನು ಕೆಲಕಾಲ ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದರು. ನಂತರ, ಉದ್ಯಮಿ ವಿಜಯ್ ಮಲ್ಯ, ನ್ಯಾಷನಲ್ ಗ್ಯಾಸ್ ಕಾರ್ಪೊರೇಷನ್ ಸೇರಿದಂತೆ ಹಲವು ಸರ್ಕಾರಿ ತಾಣಗಳು ಪಾಕ್ ಹ್ಯಾಕರ್ ಗಳ ಕಪಿಮುಷ್ಟಿ ಸಿಕ್ಕಿಬಿದ್ದಿದ್ದವು. ವೆಬ್ ಹ್ಯಾಕಿಂಗ್ ಬಗ್ಗೆ ಕಾಂಗ್ರೆಸ್ ಆಂತರಿಕ ತಂಡ ತನಿಖೆ ನಡೆಸುತ್ತಿದೆ.












Click it and Unblock the Notifications