ಸ್ನೇಹಿತರ ಜತೆ ಸಂಭೋಗಿಸು ಅನ್ನುತ್ತಿದ್ದ ಟೆಕ್ಕಿ ಗಂಡ

ಇಂತಿಪ್ಪ ಟೆಕ್ಕಿ, ಮಾಡಿದ್ದಾದರೂ ಏನು ಅಂದ್ರೆ ದಂತ ವೈದ್ಯೆಯಾಗಿರುವ ತನ್ನ ಹೆಂಡ್ತಿಯನ್ನು ಸ್ನೇಹಿತರ ಜತೆ ಸಂಭೋಗಿಸು ಅನ್ನುತ್ತಿದೆ. ಅಷ್ಟೇ ಅಲ್ಲ. ಅಂತಹ ಅಶ್ಲೀಲ, ಅಸಭ್ಯ ದೈಶ್ಯಗಳನ್ನು ವಿಡಿಯೋ ಮಾಡಿ, ಇಂಟರ್ನೆಟ್‌ಗೆ ತುರುಕಿ ಕಾಸು ಮಾಡಿಕೊಳ್ಳುವ ದೂರಾಲೋಚನಯೆನ್ನೂ ಮಾಡಿದ್ದ.
ಹೀಗಂತ ಆರೋಪಿಸಿ ದಂತ ವೈದ್ಯೆ ಕೋರ್ಟ್ ಮೊರೆ ಹೋಗಿದ್ದು, ಪೊಲೀಸ್ ತನಿಖೆಗೆ ಆದೇಶಿಸಲಾಗಿದೆ. ಪ್ರಕರಣ ಏನಪಾ ಅಂದರೆ ಅವ ಬೆಂಗಳೂರಿನ ಟೆಕ್ಕಿ. ಎಂಎನ್ ಸಿ ಕಂಪನಿಯಲ್ಲಿ ಪ್ರಾಜೆಕ್ಟ್ ಲೀಡರ್ ಆಗಿ ನೌಕರಿ ಮಾಡುತ್ತಿದ್ದಾನೆ. ಇವನ ವಿರುದ್ಧ ಮತ್ತು ಇತರೆ 11 ಮಂದಿಯ ವಿರುದ್ಧ ದಂತ ವೈದ್ಯೆ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ. ಜ್ಞಾನಭಾರತಿ ಪೊಲೀಸರು ಈಗ ಟೆಕ್ಕಿ ಬೆನ್ನುಹತ್ತಿದ್ದಾರೆ.
ತಿರುಮಲೇಶ್ ಎಂಬ ಟೆಕ್ಕಿ ಕಳೆದ ವರ್ಷ ಸೆಪ್ಟೆಂಬರ್ 19ರಂದು 29 ವರ್ಷದ ಸಂಜನಾ ಎಂಬ ದಂತ ವೈದ್ಯೆಯನ್ನು (ಇಬ್ಬರ ಹೆಸರನ್ನೂ ಬದಲಾಯಿಸಲಾಗಿದೆ) ಮದ್ವೆಯಾಗಿದ್ದ. ತಿರುಮಲೇಶನ ಅಪ್ಪ-ಅಮ್ಮನ ಮನೆಯಲ್ಲೇ ಹೊಸ ಬಾಳು ಆರಂಭಿಸಿದೆ. ಆರಂಭದಲ್ಲೇ ಗೊತ್ತಾದ ಆಘಾತಕಾರಿ ಸಂಗತಿಯೆಂದರೆ ತಿರುಮಲೇಶನಿಗೆ ಸಾವಿತ್ರಿ (ಆಪಾದಿತ 11 ಮಂದಿ ಪೈಕಿ ಒಬ್ಬಳು) ಎಂಬುವವಳ ಜತೆ ಸಂಬಂಧವಿತ್ತು. ಮೇಲುಡುಪು ಇಲ್ಲದೇ ನಿಂತಿರುವ ಇವರಿಬ್ಬರದೂ ಫೋಟೋ ನನ್ನ ಕಣ್ಣಿಗೆ ಬಿತ್ತು.












Click it and Unblock the Notifications