ಯಡ್ಡಿ ಕಾಲಿಗೆ ಬಿದ್ದಿರುವ ಈ ಮಹಿಳೆ ಯಾರು ಗೊತ್ತಾ!?

ಗಮನಾರ್ಹವೆಂದರೆ ಯಡಿಯೂರಪ್ಪನವರಿಗೆ ಈ ಬಾರಿಯ ಅಧಿವೇಶನ ಅವರದೇ ಆದ ಕಾರಣಗಳಿಂದಾಗಿ ವಿಶೇಷವಾಗಿದೆ. ಆದ್ದರಿಂದ ಅವರೂ ಸಂಪೂರ್ಣ ಲಹರಿಯಲ್ಲಿದ್ದಾರೆ. ಯಾರೆಲ್ಲ, ಏನೆಲ್ಲ ಆಟವಾಡುತ್ತಾರೆ. ಯಾರು ಕಾಲಿಗೆ ಬೀಳುತ್ತಾರೆ. ಯಾರು ಕಾಲೆಳೆಯುತ್ತಿದ್ದಾರೆ ಎಂಬುದನ್ನು ಮೌನವಾಗಿ ಗಮನಿಸುತ್ತಿದ್ದಾರೆ. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದಾಗ ಯಡಿಯೂರಪ್ಪ ಅವರು ಬಿಜೆಪಿಯಲ್ಲಿ ಇನ್ನೂ ಪ್ರಶ್ನಾತೀತ ನಾಯಕರಾಗಿ ಚಲಾವಣೆಯಲ್ಲಿದ್ದಾರೆ ಎಂಬುದು ಮನದಟ್ಟಾಗುತ್ತದೆ.
ಹಾಗೆ ನೋಡಿದರೆ ಪ್ರಸಕ್ತ ಅಧಿವೇಶನದಲ್ಲಿ ಯಡಿಯೂರಪ್ಪನವರ ಕಾಲಿಗೆ ಬಿದ್ದವರ ಸಂಖ್ಯೆ ಅಸಂಖ್ಯಾತ ಅಂತಲೇ ಹೇಳಬಹುದು. ಸಾಕ್ಷಾತ್ ಮುಖ್ಯಮಂತ್ರಿಯವರೇ ಯಡಿಯೂರಪ್ಪನವರಿಗೆ ಕಾಲ್ಮುಟ್ಟಿ ನಮಸ್ಕರಿಸಿದರು. ಇದು ರಾಜ್ಯ ವಿಧಾನಸಭೆಯ ಕಲಾಪದ ವೇಳೆ ವಿಧಾನಸೌಧದಲ್ಲಿ ಕಂಡು ತಾಜಾ ಬಂದ ದೃಶ್ಯ. ಇಲ್ಲಿ ರಾಜ್ಯ ರಾಜಕೀಯದ 'ಶಕ್ತಿಶಾಲಿ' ಮಹಿಳೆಯೊಬ್ಬರು ನಾಡಿನ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕಾಲಿಗೆ ಬಿದ್ದಿದ್ದಾರೆ.
ಈ ಹಿನ್ನೆಲೆಯಲ್ಲಿ, ನಮ್ಮ ಸರಳ ಪ್ರಶ್ನೆ ಇಷ್ಟೇ. ಚಿತ್ರದಲ್ಲಿರುವ ಮಹಿಳೆ ಯಾರು?












Click it and Unblock the Notifications