ಮದುರೈನಲ್ಲಿ ಬಾಂಬ್, ತ್ರಿಚ್ಚಿಯಲ್ಲಿ ಬುಲೆಟ್ ಪತ್ತೆ
ಮದುರೈ,
ಡಿ. 7 : ತಿಂಡಿ ಡಬ್ಬಿಯಲ್ಲಿ ಇಟ್ಟಿದ್ದ ಟೈಂ ಬಾಂಬ್ ಮದುರೈನ ತಿರುವತ್ತೂರ್ ನಲ್ಲಿ ಪತ್ತೆಯಾಗಿದ್ದು, ಪೊಲೀಸರ ಸಕಾಲದಲ್ಲಿ ನಿಷ್ಕ್ರಿಯಗೊಳಿಸಿದ್ದರಿಂದ ಅನಾಹುತ ತಪ್ಪಿದೆ. id="toptextpromo">ಬೆಳಿಗ್ಗೆ
7 ಗಂಟೆಗೆ ಅಪರಿಚಿತರು ಆ ಡಬ್ಬಿಯನ್ನು ಮೇಲೂರಿನಲ್ಲಿ ಬಸ್ಸಿನಲ್ಲಿ ಇಟ್ಟಿದ್ದರು. ಅದು 1 ಗಂಟೆಗೆ ಸ್ಫೋಟಗೊಳ್ಳಬೇಕಾಗಿತ್ತು. ಸುಮಾರು ಹೊತ್ತು ಅದು ಬಸ್ಸಲ್ಲೇ ಇದ್ದದ್ದನ್ನು ಗಮನಿಸಿದ ಪ್ರಯಾಣಿಕರೊಬ್ಬರು ಅದನ್ನು ಬಸ್ಸಿನಿಂದ ಹೊರಗೆ ಎಸೆದಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಇದನ್ನು
ಗಮನಿಸಿದ ಯುವಕನೊಬ್ಬ ಕೂಡಲೆ ಪೊಲೀಸರಿಗೆ ತಿಳಿಸಿದ್ದಾನೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳದವರು ಬಾಂಬನ್ನು ನಿಷ್ಕ್ರಿಯಗೊಳಿಸಿದರು. ಇದೇ ಸಮಯದಲ್ಲಿ ತ್ರಿಚ್ಚಿ ಬಸ್ಸಿನಲ್ಲಿ ಕೂಡ ಬುಲೆಟ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.











Click it and Unblock the Notifications