ಕಾಲೇಜ್ ಗರ್ಲ್ ಆದಳು ಕಾಲ್ಗರ್ಲ್ ; ಹಣವೇ ನಿನ್ನಯ ಗುಣವೇ

ಇತ್ತೀಚಿಗೆ ವೇಶ್ಯಾವಾಟಿಕೆ ಅಡ್ಡಾ ಮೇಲೆ ದಾಳಿ ನಡೆಸಿದಾಗ ಸಿಕ್ಕಿ ಬಿದ್ದ ತರುಣಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಆಕೆ ತನ್ನ ಕರುಣಾಜನಕ ಕತೆಯನ್ನು ಹೊರಹಾಕಿದ್ದಾಳೆ.
ನಮ್ಮ ಮನೆಯಲ್ಲಿ ಕಿತ್ತು ತಿನ್ನೋ ದಾರಿದ್ರ್ಯ. ಹಾಗೂ ಹೀಗೂ ನಾನು ಕಾಲೇಜು ಮೆಟ್ಟಿಲೇರಿದೆ ಆದರೆ, ತೀವ್ರವಾದ ಬಡತನ ನನ್ನನ್ನು ರೊಚ್ಚಿಗೆಬ್ಬಿಸಿ ಬಿಟ್ಟಿತು. ನಾನು ಎಲ್ಲರಂತೆ ಐಷಾರಾಮಿ ಬದುಕು ಕಾಣಬೇಕು ಎಂದು ನಿರ್ಧರಿಸಿಬಿಟ್ಟೆ. ಸುಮಾರು ಎರಡು ವರ್ಷವಾಯಿತು ನಾನು ಈ ದಂಧೆಗೆ ಇಳಿದು ಎಂದು ಕಾಲೇಜು ವಿದ್ಯಾರ್ಥಿ ಹೇಳಿದ್ದಾಳೆ.
ನಗರದ ಪ್ರತಿಷ್ಠಿತ ಉದ್ಯಮಿಗಳು, ಗಣ್ಯರನ್ನು ತನ್ನ ಗಿರಾಕಿಗಳಾಗಿ ಮಾಡಿಕೊಂಡಿದ್ದ ಈಕೆ ಕೆಲಕಾಲ ಮಾಡೆಲಿಂಗ್ ಕ್ಷೇತ್ರದಲ್ಲೂ ಬೆಕ್ಕಿನನಡಿಗೆ ಇಟ್ಟು ಬಂದಿದ್ದಾಳೆ. ರಾತ್ರಿವೊಂದಕ್ಕೆ 5 ರಿಂದ 10 ಸಾವಿರ ರೂ ಚಾರ್ಜ್ ಮಾಡುತ್ತಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ತ್ವರಿತವಾಗಿ ಹಣ ಸಂಪಾದಿಸುವ ಮಾರ್ಗ ಹುಡುಕುತ್ತಿದ್ದ ಈಕೆಗೆ ವೇಶ್ಯಾವಾಟಿಕೆ ದಂಧೆಯ ದಾರಿ ತೋರಿಸಿಕೊಟ್ಟಿದ್ದು ಈಕೆಯ ಬಾಯ್ ಫ್ರೆಂಡ್. ಹಣಕ್ಕಾಗಿ ಹಂಬಲಿಸುತ್ತಿದ್ದ ಈಕೆಯನ್ನು ಬೇರೊಬ್ಬನಿಗೆ ಆತ ಮಾರಿಬಿಟ್ಟ. ಆನಂತರ ಹಿಂತಿರುಗಿ ನೋಡಿದ ಈಕೆ ಭರ್ಜರಿ ಹಣ ಗಳಿಸುವ ಗಣಿಕೆಯಾಗಿ ಮೆರೆಯತೊಡಗಿದಳು.
ಇತ್ತೀಚೆಗೆ 45 ಲಕ್ಷ ರೂ ಬೆಲೆಯ ಐಷಾರಾಮಿ ಅಪಾರ್ಟ್ಮೆಂಟ್ ಖರೀದಿಸಿದ್ದಾಳೆ. ವೇಶ್ಯಾವಾಟಿಕೆ ಮೂಲಕ ಹಣ ಗಳಿಸಿದ್ದಕ್ಕೆ ಈಕೆಗೇನೂ ಪಶ್ಚಾತ್ತಾಪ ಇದ್ದಂತೆ ಇಲ್ಲ ಎಂದು ಬರೋಡ ಪೊಲೀಸರು ಹೇಳಿದ್ದಾರೆ.












Click it and Unblock the Notifications