ಹದಿನಾರರ ಬಾಲೆ ಮೇಲೆ ಗ್ಯಾಂಗ್ ರೇಪ್
ಮೀರತ್,
ಡಿ. 6: ಹದಿನಾರರ ಬಾಲೆಯ ಮೇಲೆ ನೆರೆ ಮನೆಯ ಮೂವರು ಯುವಕರು ಸಾಮೂಹಿಕ ಅತ್ಯಾಚಾರ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. id="toptextpromo">ನಾಲ್ಕನೆಯ
ಸೆಕ್ಟರ್ ಬಡಾವಣೆ ನಿವಾಸಿಯಾಗಿರುವ 16 ವರ್ಷದ ಬಾಲಕಿ ಭಾನುವಾರ ರಾತ್ರಿ ಊಟ ಮುಗಿಸಿದ ನಂತರ ನಾಲ್ಕು ಹೆಜ್ಜೆ ಹಾಕಲು ಮನೆಯಿಂದ ಹೊರಗೆ ಬಂದಿದ್ದಳು. ಆಗ ನೆರೆಮನೆಯ ಸಂದೀಪ್ ಮತ್ತು ನರೇಶ್ ಬಾಲಕಿಯನ್ನು ಬಲವಂತವಾಗಿ ಬೇರೊಂದು ಸ್ಥಳಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಮತ್ತೊಬ್ಬ ಯುವಕ ಇವರ ಜತೆಗೂಡಿ ಹೀನಕೃತ್ಯ ಎಸಗಿದ್ದಾರೆ ಎಂದು ಡಿಐಜಿ ಪ್ರೇಮ್ ಪ್ರಕಾಶ್ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಬಾಲಕಿಯ
ಮೇಲೆ ಅತ್ಯಾಚಾರ ನಡೆದಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ. ಅಪರಾಧ ನಡೆಸಿದ ಬಳಿಕ ಸ್ಥಳದಿಂದ ಕಾಲ್ಕಿತ್ತಿರುವ ಮೂರೂ ಆರೋಪಿಗಳ ಪತ್ತೆಗಾಗಿ ಜಾಲ ಬೀಸಲಾಗಿದೆ ಎಂದು ಪ್ರಕಾಶ್ ಹೇಳಿದ್ದಾರೆ.











Click it and Unblock the Notifications