ವಿಟನಿಗಾಗಿ ಹೆತ್ತಮಕ್ಕಳಿಗೆ ವಿಷವಿಕ್ಕಿದ ಮಹಿಳೆ

ಪಕ್ಕದ ಮನೆ ಪುರುಷನೊಂದಿಗೆ ಅನೈತಿಕ ಸಂಬಂಧವಿರಿಸಿಕೊಂಡಿದ್ದ 31 ವರ್ಷದ ಅಸ್ಮಿತಾ ಕಡಕಿಯಾ ಸದ್ಯಕ್ಕೆ ಪೊಲೀಸರ ಅತಿಥಿಯಾಗಿದ್ದಾಳೆ.
ಪರಪುಷನ ಜೊತೆ ಸಂಬಂಧಕ್ಕೆ ತನ್ನ ಮಕ್ಕಳು ಮಾರಕ ಎಂದು ತಿಳಿದ ಈಕೆ, 8 ವರ್ಷದ ಮಗ ವಂಶೀಲ್ ಹಾಗೂ 10 ವರ್ಷದ ಮಗಳು ಹೇಮಿಷಾಗೆ ಸಿಹಿ ತಿನಿಸಿನಲ್ಲಿ ವಿಷ ನೀಡಿ ಕೊಲ್ಲಲು ಯತ್ನಿಸಿದ್ದಾಳೆ. ಪ್ರಜ್ಞೆ ತಪ್ಪಿದ್ದ ವಂಶೀಲ್ ಆಸ್ಪತ್ರೆಯಲ್ಲಿ ಮೃತನಾದರೆ, ಹೆಮೀಷಾ ಆಶ್ಚರ್ಯ ರೀತಿಯಲ್ಲಿ ಸಾವಿನಿಂದ ಪಾರಾಗಿ ತನ್ನ ಹೆತ್ತಮ್ಮನ ಕಾಮಕಾಂಡದ ಕಥೆಗೆ ಸಾಕ್ಷಿಯಾಗಿದ್ದಾಳೆ.
ನನ್ನ ಅಮ್ಮ ಹಾಗೂ ಆಕೆ ಅಣ್ಣ(ಮಾವ) ಇಬ್ಬರು ತಿನ್ನಲು ಪೇಡಾ ನೀಡಿದರು. ಪಕ್ಕದ ಮನೆ ಅಂಕಲ್ ಆಗಾಗ ಮನೆಗೆ ಬರ್ತಾ ಇದ್ದರು ಎಂದು ಹೇಮಿಷಾ ತನ್ನ ಹೇಳಿಕೆ ನೀಡಿದ್ದಾಳೆ.
ಡೈಮಂಡ್ ಪಾಲಿಷ್ ಕೆಲಸಗಾರ ಮುಖೇಶ್ ಕಡಾಕಿಯಾ ಎಂಬುವನನ್ನು 12 ವರ್ಷದ ಹಿಂದೆ ಮದುವೆಯಾಗಿ ಸುಖ ಸಂಸಾರದಲ್ಲಿ ತೇಲುತ್ತಿದ್ದ ಅಸ್ಮಿತಾಳಿಗೆ ನೆರೆ ಮನೆಯ ಮುಖೇಶ್ ಮಂಗುಕಿಯಾ ಎಂಬುವನ ಮೇಲೆ ಮೋಹ ಉಕ್ಕಿದೆ.
ಆತನಿಂದ ರಸಗೊಬ್ಬರ ರಾಸಾಯನಿಕ ಪಡೆದು ಸಿಹಿಯಲ್ಲಿ ಬೆರಸಿ ತನ್ನ ಮಕ್ಕಳಿಗೆ ನೀಡಿ ಕೊಲ್ಲಲು ಯತ್ನಿಸಿದ್ದಾಳೆ. ಆದರೆ, ಮಗ ಮಾತ್ರ ಸಾವನ್ನಪ್ಪಿದ್ದು, ಮಗಳು ಬದುಕುಳಿದಿದ್ದಾಳೆ.












Click it and Unblock the Notifications