ಬೆಂಗಳೂರಿನಲ್ಲಿ ಒಂಟಿ ಮಹಿಳೆಯ ಭೀಕರ ಹತ್ಯೆ

ಕೊಲೆಯಾದ ಮಹಿಳೆಯನ್ನು ಮಂಜುಳಾ (35) ಎಂದು ಗುರುತಿಸಲಾಗಿದೆ. ದರೊಡೆಕೋರರ ಕೃತ್ಯ ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಆದರೆ, ಕೊಲೆಯ ಭೀಕರತೆಗೆ ಆ ಸುಬ್ಬಣ್ಣ ಗಾರ್ಡನ್ ಪ್ರದೇಶದ ನಾಗರಿಕರು ಬೆಚ್ಚಿಬಿದ್ದಿದ್ದಾರೆ.
ಕೊಲೆಯಾಗಿರುವುದು ಸಂಜೆ ನಾಲ್ಕು ಗಂಟೆಗೆ ತಿಳಿದುಬಂದಿದೆ. ಮಂಜುಳಾ ಅವರಿಗೆ ಇಬ್ಬರು ಮಕ್ಕಳಿದ್ದು, ಅವರನ್ನು ಪಕ್ಕದ ಮನೆಗೆ ಓದಿಗಾಗಿ ಕಳುಹಿಸಲಾಗಿತ್ತು. ಗಂಡ ಚಂದ್ರು ಅವರು ಮನೆಯ ಮೇಲಿನ ಕೋಣೆಯಲ್ಲಿದ್ದರು. ಆಕೆಯ ಮೈಮೇಲಿದ್ದ ಒಡವೆಗಳು ನಾಪತ್ತೆಯಾಗಿವೆ.
ಒಂಟಿಯಾಗಿದ್ದ ಮಂಜುಳಾ ಅವರ ಕತ್ತು ಕುಯ್ಯಲಾಗಿದ್ದು, ತಲೆಯನ್ನು ಕೊಚ್ಚಿಹಾಕಲಾಗಿದೆ. ವಿಜಯನಗರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಕೊಲೆಗಾರರ ಸುಳಿವಿಗೆ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಮತ್ತು ಶ್ವಾನ ದಳ ಕೂಡ ಧಾವಿಸಿದೆ.












Click it and Unblock the Notifications