ಈಜಿಪುರ:ದುಷ್ಕರ್ಮಿಗಳಿಂದ ಬಾರ್ ನರ್ತಕಿಯರ ರೇಪ್ ಯತ್ನ
ಬೆಂಗಳೂರು,
ಡಿ. 5: ದುಷ್ಕರ್ಮಿಗಳ ಗುಂಪೊಂದು ಮನೆಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿದ್ದರಿಂದ ಆತಂಕಗೊಂಡ ಬಾರ್ ನರ್ತಕಿಯರು ತಪ್ಪಿಸಿಕೊಳ್ಳುವ ಧಾವಂತದಲ್ಲಿ ಕಟ್ಟಡದಿಂದ ಕೆಳಗೆ ಜಿಗಿದು ಗಾಯಗೊಂಡಿರುವ ಘಟನೆ ಈಜಿಪುರದ ಆರಾಧನಾ ಲೇಔಟಿನಲ್ಲಿ ಭಾನುವಾರ ಸಂಜೆ ನಡೆದಿದೆ. ಗಾಯಗೊಂಡ ಯುವತಿಯರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. id="toptextpromo">ಬಾರ್
ಗಳಲ್ಲಿ ಕೆಲಸ ಮಾಡುವ ಹಲವು ಮಹಿಳೆಯರು ಇಲ್ಲಿ ಮೂರು ಅಂತಸ್ತಿನ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಆ ಕಟ್ಟಡದ ಎರಡನೆಯ ಮನೆಗೆ ನುಗ್ಗಿದ ಗೂಂಡಾಗಳು ಅಲ್ಲಿದ್ದ ನಾಲ್ಕು ಬಾರ್ ನರ್ತಕಿಯರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಇದರಿಂದ ಆತಂಕಗೊಂಡು ಬಾರ್ ನರ್ತಕಿಯರು ಮನೆಯ ಕಿಟಕಿ ಕಂಬಿಗಳಿಗೆ ಹಗ್ಗ ಕಟ್ಟಿ ಕೆಳಗೆ ಜಿಗಿಯಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ಆಯತಪ್ಪಿ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಮತ್ತಿಬ್ಬರು ಹಗ್ಗದ ಮೂಲಕ ಸುರಕ್ಷಿತವಾಗಿ ಕೆಳಗಿಳಿದಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಬಾರ್
ನರ್ತಕಿಯರು ವಾಸವಾಗಿರುವ ಈ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ. ಆ ಬಗ್ಗೆ ಪೊಲೀಸರಿಗೆ ಹಲವು ಬಾರಿ ಮಾಹಿತಿ ನೀಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿತ್ತು. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.











Click it and Unblock the Notifications