ಗುಪ್ತ ಫಲಿತಾಂಶ ನಿಜವಾಗಲಿದೆ, ಶ್ರೀರಾಮುಲು ಸಕತ್ ಲೀಡ್

B Sriramulu
ಬಳ್ಳಾರಿ, ಡಿ.4: ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆ ಫಲಿತಾಂಶದ ಬಗ್ಗೆ ರಾಜ್ಯ ಗುಪ್ತ ದಳ ನೀಡಿದ ವರದಿ ನಿಜವಾಗುವಂತೆ ಕಾಣುತ್ತಿದೆ. ಆಡಳಿತಾರೂಢ ಬಿಜೆಪಿ ಮೂರನೇ ಸ್ಧಾನ ಖಚಿತವಾಗಲಿದೆ.

ನಿರೀಕ್ಷೆಯಂತೆ ಶ್ರೀರಾಮುಲು ಆರಂಭಿಕ ಮುನ್ನಡೆ ಪಡೆದಿದ್ದು, ಕಡಿಮೆ ಅಂತರದಿಂದ ಕಾಂಗ್ರೆಸ್‌ನ ರಾಮ್ ಪ್ರಸಾದ್ ಅವರನ್ನು ಸೋಲಿಸಲಿದ್ದಾರೆ.

ಮೊದಲ ನಾಲ್ಕು ಸುತ್ತಿನ ಮತ ಎಣಿಕೆ ಕಾರ್ಯ ಮುಗಿದಿದ್ದು, 15283 ಮತ ಪಡೆದಿರುವ ಶ್ರೀರಾಮುಲು ಮುಂದಿದ್ದಾರೆ. 7769 ಮತ ಪಡೆದ ರಾಮಪ್ರಸಾದ್ ಹಾಗೂ 2502 ಪಡೆದಿರುವ ಗಾದಿ ಲಿಂಗಪ್ಪ ತೀರಾ ಹಿಂದೆ ಉಳಿದಿದ್ದಾರೆ.

ಶ್ರೀರಾಮುಲು ಅಭಿಮಾನಿಗಳು ಗೆಲುವಿನ ವಾಸನೆ ಹತ್ತಿದ್ದು, ಆಗಲೇ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. 5545 ಮತಗಳ ಅಂತರ ಕಾಯ್ದುಕೊಂಡಿರುವ ಶ್ರೀರಾಮುಲು ಅವರಿಗೆ ಕೌಲ್ ಬಜಾರ್ ವಾರ್ಡ್ ಇನ್ನಷ್ಟು ಬಹುಮತ ತಂದುಕೊಡುವ ನಿರೀಕ್ಷೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+