ಮಹಿಳೆಯರಿಗಾಗಿ ವಿಶೇಷ ಪ್ರೀಮಿಯಂ ಕ್ರೆಡಿಟ್ ಕಾರ್ಡ್

ವರದಿಯ ಪ್ರಕಾರ ದೇಶದ ಶೇ. 40ರಷ್ಟು ಮನೆಯಲ್ಲಿ ಮಹಿಳೆಯರ ಮೇಲೆ ಮನೆ ನಿಭಾಯಿಸುವ ಜವಾಬ್ದಾರಿ ಇರುವುದರಿಂದ ದೇಶದ ಪ್ರತಿಷ್ಟಿತ ಬ್ಯಾಂಕ್ ಎಚ್ ಡಿ ಎಫ್ ಸಿ ಬ್ಯಾಂಕ್ ಈ ಸೌಲಭ್ಯ ನೀಡಲು ಮುಂದಾಗಿದೆ. ಸಾಲಿಟೇರ್ ಪ್ರೀಮಿಯಂ ಮತ್ತು ಸಾಲಿಟೇರ್ ಹೆಸರಿನ ಎರಡು ಮಾದರಿಯ ಕ್ರೆಡಿಟ್ ಕಾರ್ಡ್ ಗಳನ್ನೂ ಬ್ಯಾಂಕ್ ಹೊರ ತಂದಿದೆ.
ಮುಂದಿನ ಎರಡು ವರ್ಷಗಳಲ್ಲಿ ಸುಮಾರು ನಾಲ್ಕು ಮಿಲಿಯನ್ ಕ್ರೆಡಿಟ್ ಕಾರ್ಡ್ ಅನ್ನು ಮಹಿಳೆಯರಿಗೆ ವಿತರಿಸುವ ಟಾರ್ಗೆಟ್ ಹಾಕಿ ಕೊಂಡಿರುವ ಬ್ಯಾಂಕ್, ಈ ಹೊಸ ಕ್ರೆಡಿಟ್ ಕಾರ್ಡ್ ಯಶಸ್ವಿಯಾಗುವ ವಿಶ್ವಾಸ ಹೊಂದಿದೆ.
ಸದ್ಯ ಬ್ಯಾಂಕ್ ಒಟ್ಟಾರೆ ಆರು ಮಿಲಿಯನ್ ಗ್ರಾಹಕರನ್ನು ಹೊಂದಿದೆ. ಸಾಲಿಟೇರ್ ಪ್ರೀಮಿಯಂ ಐದು ಲಕ್ಷ ಮತ್ತು ಸಾಲಿಟೇರ್ ಕಾರ್ಡ್ ಎರಡು ಲಕ್ಷ ಲಿಮಿಟ್ ಹೊಂದಿರುತ್ತದೆ.
ಕಾರ್ಡ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ : http://www.hdfcbank.com/personal/Cards/Credit_Cards/Solitaire_Credit_Card/cc_solitaire.htm












Click it and Unblock the Notifications