ಪೊಲೀಸ್ ಜೀಪಿನಲ್ಲಿ ಬಾರ್ ಗರ್ಲ್: ಪೇದೆ ಸಸ್ಪೆಂಡ್
ಮುಂಬೈ,
ಡಿ. 2: ಪೇದೆಯೊಬ್ಬ ಪೊಲೀಸ್ ಜೀಪಿನಲ್ಲೇ ಒಬ್ಬ ಬಾರ್ ಡ್ಯಾನ್ಸರ್ ಅನ್ನು ಕೂಡಿಸಿಕೊಂಡು ಓಡಾಡುತ್ತಿರುವುದು ಕಣ್ಣಿಗೆ ಬಿದ್ದು ಮೇಲಧಿಕಾರಿ ಆ ಪೇದೆಯನ್ನು ಸಸ್ಪೆಂಡ್ ಮಾಡಿದ್ದಾರೆ. id="toptextpromo">ಇಲ್ಲಿನ
ಸೇನಾಭವನದ ಎದುರು ಎಲ್ ಜಿ ಕಾರ್ನರಿನಲ್ಲಿ ಗುರುವಾರ ಬೆಳಗಿನ ಜಾವ 2 ಗಂಟೆಯಲ್ಲಿ ಎಸ್. ಎಂ. ಮೋರೆ ಎಂಬ ಪೊಲೀಸ್ ಪೇದೆ ಶ್ವೇತಬಣ್ಣದ ಪೊಲೀಸ್ ಜೀಪಿನಲ್ಲಿ ಕುಳಿತಿರುವುದು ಡಿಸಿಪಿ ಕಿಶೋರ್ ಜಾಧವ್ ಅವರ ಕಣ್ಣಿಗೆ ಬಿದ್ದಿದೆ. 'ತಾನು ಜೀಪಿನ ಬಳಿ ಸಾಗುತ್ತಿದ್ದಂತೆ ಮೋರೆ ಓಡಿಹೋಗಿದ್ದಾನೆ. ಆದರೆ ಜೀಪಿನಲ್ಲಿ 57 ವರ್ಷದ ಉದ್ಯಮಿ ಮತ್ತು 27 ವರ್ಷದ ಬಾರ್ ಗರ್ಲ್ ಇದ್ದರು' ಎಂದು ಜಾಧವ್ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಮೋರೆ
ತನ್ನ ಮೇಲಧಿಕಾರಿಯನ್ನು ಅವರ ಮನೆ ಬಳಿ ಬಿಟ್ಟು ವಾಪಸಾಗುವಾಗ ರೂಢಿಯಂತೆ ಉದ್ಯಮಿ ಮತ್ತು ಬಾರ್ ಗರ್ಲ್ ಅನ್ನು ಜೀಪಿಗೆ ಹತ್ತಿಸಿಕೊಂಡಿದ್ದಾನೆ. ಜೀಪನ್ನು ಕಾನೂನುಬಾಹಿರ ಚಟುವಟಿಕೆಗೆ ಬಳಸಿದ ಆರೋಪದ ಮೇಲೆ ಮೋರೆಯನ್ನು ಸಸ್ಪೆಂಡ್ ಮಾಡಲಾಗಿದೆ. ಈ ಮಧ್ಯೆ, ಉದ್ಯಮಿ ಮತ್ತು ಬಾರ್ ಗರ್ಲ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.











Click it and Unblock the Notifications