ವಿಪ್ರೋ ಪ್ರೇಂಜಿ ವಿವಿ ಎಂಎ ಕೋರ್ಸ್ ಗೆ ಅರ್ಜಿ ಹಾಕಿ

Wipro University
ಬೆಂಗಳೂರು, ಡಿ.1: ವಿಪ್ರೋ ಸಂಸ್ಥೆ ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ಪ್ರವೇಶ ಅರ್ಜಿಗಳನ್ನು ಕರೆಯಲಾಗಿದೆ. ಕರ್ನಾಟಕ ಸರ್ಕಾರದ ಅಜೀಂ ಪ್ರೇಂಜಿ ವಿಶ್ವವಿದ್ಯಾಲಯ ಕಾಯ್ದೆ 2010 ಆಡಿಯಲ್ಲಿ ಸ್ಥಾಪಿತವಾಗಿರುವ ವಿಪ್ರೋ ವಿವಿಯ 2012-2014ನೇ ಸಾಲಿನ ಎಂಎ ಶಿಕ್ಷಣ ವಿಭಾಗಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ವೃತ್ತಿಪರರು, ಶಿಕ್ಷಕರು ಹಾಗೂ ಇತರೆ ಪದವೀಧರರು ಎಂಎ ಶಿಕ್ಷಣ, ಶಿಕ್ಷಕ ಅಭಿವೃದ್ಧಿ ವಿಷಯಗಳಿಗೆ ಅರ್ಜಿ ಹಾಕಬಹುದಾಗಿದೆ.

ಫೆ.26, 2012ರಂದು ದೇಶದಾದ್ಯಂತ 28 ಕೇಂದ್ರಗಳಲ್ಲಿ ಎಂಎಗೆ ಪ್ರವೇಶ ಪರೀಕ್ಷೆ ನಡೆಯಲಿದೆ. ಇಂಗ್ಲೀಷ್ ಭಾಷಾ ಜ್ಞಾನ, ಸಾಮಾಜಿಕ ಪ್ರಜ್ಞೆ ಹಾಗೂ ಸಮಕಾಲೀನ ವಿಷಯಗಳ ಮೇಲೆ ಅಭ್ಯರ್ಥಿ ಹೊಂದಿರುವ ಪರಿಣತಿಯನ್ನು ಪ್ರವೇಸ ಪರೀಕ್ಷೆ ಮೂಲಕ ಅಳೆಯಲಾಗುತ್ತದೆ.

ಅಜೀಂ ಪ್ರೇಂಜಿ ಫೌಂಡೇಷನ್ ಮುಂದಿನ 4 ವರ್ಷಗಳಲ್ಲಿ 4000 ವೃತಿಪರರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಅರ್ಜಿಗಳನ್ನು ಆನ್ ಲೈನ್ ಮೂಲಕ ತುಂಬಲು ಅಜೀಂ ಪ್ರೇಂಜಿ ವಿಶ್ವವಿದ್ಯಾಲಯ ವೆಬ್ ತಾಣಕ್ಕೆ ಭೇಟಿಕೊಡಿ. ಅರ್ಜಿಗಳನ್ನು ಫೆ.10, 2012 ರೊಳಗೆ ಕಳುಹಿಸತಕ್ಕದ್ದು.

ಅಂಚೆ ಮೂಲಕ: ಕವರ್ ನಲ್ಲಿ ನಿಮ್ಮ ಹೆಸರು, ವಿಳಾಸ, ಇತರೆ ವಿವರಗಳೊಂದಿಗೆ ಸ್ವ ವಿಳಾಸವುಳ್ಳ ಅರ್ಜಿ ಜೊತೆಗೆ 50 ರೂ ಅಂಚೆ ವೆಚ್ಚದೊಂದಿಗೆ ಕೆಳಗಿನ ವಿಳಾಸಕ್ಕೆ ಕಳುಹಿಸಿ:
Pixel Park, B Block,
PESSE Campus, Electronics City,
Hosur Road (Beside NICE Road),
Bangalore 560100.

ದೂರವಾಣಿ: 080 6614 5150,
ಫ್ಯಾಕ್ಸ್ : 080 6614 5145,
ಟೋಲ್ ಫ್ರೀ: 1800 266 2001
ಇಮೇಲ್ :[email protected],
ಫೇಸ್ ಬುಕ್: www.facebook.com/azimpremjiuniversity
ವೆಬ್ ತಾಣ: www.azimpremjiuniversity.edu.in

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+