ಮೇ 6, 2012ರಂದು ಕಾಮೆಡ್-ಕೆ ಪ್ರವೇಶ ಪರೀಕ್ಷೆ

ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ(ಎಮ್.ಸಿ.ಐ) ಒಂದೇ ಪ್ರವೇಶ ಪರೀಕ್ಷೆ ನಡೆಸಬೇಕೆಂಬ ಪ್ರಯತ್ನದಲ್ಲಿತ್ತು. ಆದರೆ, ಇದರ ವಿರುದ್ಧ ಕಾಮೆಡ್-ಕೆ ಕೋರ್ಟಿನ ಮೆಟ್ಟಿಲೇರಿತ್ತು. ಎಮ್.ಸಿ.ಐ ಹೊರಡಿಸಿದ್ದ ಸುತ್ತೋಲೆಗೆ ಕರ್ನಾಟಕ ಹೈಕೋರ್ಟ್ ನವೆಂಬರ್ 21ರಂದು ಮಧ್ಯಂತರ ತಡೆ ನೀಡಿತು.
ಮಾರ್ಚ್ 10, 2012ರಿಂದ ಪರೀಕ್ಷೆಗಾಗಿ ಆನ್‌ಲೈನ್ ಅರ್ಜಿಗಳು ಲಭ್ಯವಾಗಲಿವೆ. ಈ ಪರೀಕ್ಷೆಯ ಕುರಿತಾಗಿ ಹೆಚ್ಚಿನ ವಿವರಗಳನ್ನು ಕಾಮೆಡ್-ಕೆ ಅಂತರ್ಜಾಲ ತಾಣದಲ್ಲಿ ಫೆಬ್ರವರಿ 15, 2012ರ ನಂತರ ನಿರೀಕ್ಷಿಸಬಹುದು ಎಂದು ಕಾಮೆಡ್-ಕೆ ಚೇರ್ಮನ್ ಎಂ.ಆರ್. ಜಯರಾಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಖಾಸಗಿ ಮೆಡಿಕಲ್ ಮತ್ತು ಡೆಂಟಲ್ ಕಾಲೇಜು ಮತ್ತು ಕರ್ನಾಟಕದ ಅನುದಾನರಹಿತ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಅಸೋಸಿಯೇಷನ್ ಅಧೀನದಲ್ಲಿ ಬರುವ ಕಾಲೇಜುಗಳ ಸೀಟುಗಳಿಗಾಗಿ ಪರೀಕ್ಷೆಗಳು ನಡೆಯಲಿವೆ.












Click it and Unblock the Notifications