ಗುಡ್ ನ್ಯೂಸ್ : ನಿಮ್ಮ ಕೇಬಲ್ ಟಿವಿ ಡಿಜಿಟಲ್ ಆಗಲಿದೆ

ಉತ್ತಮ ಗುಣಮಟ್ಟದ ಟಿವಿ ಪ್ರಸಾರ ಎಲ್ಲರಿಗೂ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಕೇಬಲ್ ಟಿವಿ ಪ್ರಸಾರವನ್ನು ಡಿಜಿಟಲ್ ಗೆ ಪರಿವರ್ತಿಸಲು ಸರ್ಕಾರ ಮುಂದಾಗಿದೆ.
ಕೇಬಲ್ ಟಿವಿ ಪ್ರಸಾರದಲ್ಲಿ ಡಿಜಿಟೈಜೇಷನ್ ಕಡ್ಡಾಯಗೊಳಿಸುವ ಕೇಬಲ್ ಟಿವಿ ಸಂಪರ್ಕ (ನಿಯಂತ್ರಣ) ಕಾಯ್ದೆಗೆ ತಿದ್ದುಪಡಿ ಮಾಡಿ ಲೋಕಸಭೆಯಲ್ಲಿ ಮಸೂದೆಯೊಂದನ್ನು ಮಂಡಿಸಲಾಗಿದೆ.
2014ರ ಡಿಸೆಂಬರ್ 31ರೊಳಗೆ ದೇಶದ ಕೇಬಲ್ ಟಿವಿ ವಲಯವನ್ನು ಡಿಜಿಟೈಜೇಷನ್ ಮಾಡಲಾಗುವುದು ಎಂದು ವಾರ್ತಾ ಮತ್ತು ಪ್ರಸಾರ ಸಚಿವೆ ಅಂಬಿಕಾ ಸೋನಿ ಲೋಕಸಭೆಯಲ್ಲಿ ಹೇಳಿದ್ದಾರೆ.
2012ರ ಮಾರ್ಚ್ 31ರೊಳಗೆ 4 ಮಹಾನಗರಗಳಲ್ಲಿ ಕೇಬಲ್ ಟಿವಿಯನ್ನು ಡಿಜಿಟೈಜೇಷನ್ ಮಾಡುವ ಗುರಿ ಹೊಂದಲಾಗಿದೆ. 10 ಲಕ್ಷ ಜನಸಂಖ್ಯೆ ಹೊಂದಿರುವ ನಗರಗಳು ನಂತರದ ದಿನಗಳಲ್ಲಿ ಈ ಸೌಲಭ್ಯ ಪಡೆಯಲಿದೆ.
2014ರೊಳಗೆ ದೇಶಾದ್ಯಂತ ಡಿಜಿಟಲ್ ಕೇಬಲ್ ಟಿವಿ ಪ್ರಸಾರ ಮಾತ್ರ ಕಾಣಬಹುದು ಎಂದು ವಾರ್ತಾ ಮತ್ತು ಪ್ರಚಾರ ಇಲಾಖೆ ಪ್ರಕಟಿಸಿದೆ.
ವೀಕ್ಷಕರಿಗೆ ಉತ್ತಮ ಗುಣಮಟ್ಟದ ವೀಕ್ಷಣೆ ಮತ್ತು ಹೆಚ್ಚು ಚಾನೆಲ್‌ಗಳನ್ನು ನೀಡುವ ಉದ್ದೇಶದಿಂದ ಭಾರತ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) 2010ರ ಆಗಸ್ಟ್ ನಲ್ಲಿ ಟಿವಿ ಡಿಜಿಟೈಜೈಷನ್ ಕಡ್ಡಾಯಗೊಳಿಸಲು ಮಾಡಿದ್ದ ಶಿಫಾರಸನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಅಂಗೀಕರಿಸಿತ್ತು.











Click it and Unblock the Notifications