ಬಳ್ಳಾರಿ: 1367 ಆಯುಧ ವಶಪಡಿಸಿಕೊಂಡ ಪೊಲೀಸರು

bellary-rural-bypolls-arms-confiscated-dc
ಬಳ್ಳಾರಿ, ನ.29: ಬಳ್ಳಾರಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮತದಾನದ ಹಿನ್ನೆಲೆಯಲ್ಲಿ 1367 ಆಯುಧಗಳನ್ನು ವಶಪಸಿಕೊಳ್ಳಲಾಗಿದೆ. ಸಮಾಜದ ನೆಮ್ಮದಿಯನ್ನು ಕದಡುವಂತಹವರು ಸೇರಿದಂತೆ ಒಟ್ಟು 190 ಮಂದಿಯಿಂದ ಮುಚ್ಚಳಿಕೆ ಪತ್ರವನ್ನು ಬರೆಸಿಕೊಳ್ಳಲಾಗಿದ್ದು, 64 ಮಂದಿಯನ್ನು ಈವರೆಗೆ ಮುಂಜಾಗ್ರತ ಕ್ರಮವಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಡಾ. ಚಂದ್ರಗುಪ್ತ ತಿಳಿಸಿದ್ದಾರೆ.

ಒಟ್ಟು 195 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 950 ಮತಗಟ್ಟೆ ಸಿಬ್ಬಂದಿಯನ್ನು ನಿಯೋಜಿಸಿ ತರಬೇತಿಯನ್ನು ನೀಡಲಾಗಿದೆ. ಇದರೊಂದಿಗೆ ನ. 30 ರಂದು ನಡೆಯಲಿರುವ ಮತದಾನಕ್ಕೆ ಮುಕ್ತ ವಾತಾವರಣ ಕಲ್ಪಿಸಲು ಸರ್ವ ಸಿದ್ಧತೆ ಮಾಡಲಾಗಿದೆ ಎಂದು ಪೂರ್ವ ವಲಯದ ಐಜಿಪಿ ಸಂಜಯ ಸಹಾಯ್‌ ಹಾಗೂ ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಅಮ್ಲಾನ್‌ ಆದಿತ್ಯ ಬಿಸ್ವಾಸ್‌ ವಿವರ ನೀಡಿದ್ದಾರೆ.

195 ಮತಗಟ್ಟೆಗಳಲ್ಲಿ 118 ಸೂಕ್ಷ್ಮ ಮತಗಟ್ಟೆಗಳಿದ್ದು, 15 ಅತೀ ಸೂಕ್ಷ್ಮ ಮತಗಟ್ಟೆ ಎಂದು ಪರಿಗಣಿಸಲಾಗಿದೆ. ಸೂಕ್ಷ್ಮ ಮತಗಟ್ಟೆಗಳಿಗೂ ಅತೀ ಸೂಕ್ಷ್ಮ ಮತಗಟ್ಟೆಗಳಿಗೆ ನೀಡುವಷ್ಟು ಭದ್ರತೆಯನ್ನು ನೀಡಲಾಗುವುದು ಎಂದು ಸಹಾಯ್‌ ಹೇಳಿದ್ದಾರೆ. 31 ಕ್ಯಾಮರಾಗಳು ಮತದಾನ ಕುರಿತು ಸೆರೆಹಿಡಿಯಲಿದ್ದು, ಸೂಕ್ಷ್ಮ, ಅತೀ ಸೂಕ್ಷ್ಮಮತಗಟ್ಟೆಗಳ ಕಡೆ ವಿಶೇಷ ಗಮನವನ್ನು ಹರಿಸಲಾಗುತ್ತಿದೆ. ಈಗಾಗಲೇ ಅರೆಸೇನಾ ಪಡೆಯು ಕ್ಷೇತ್ರದಲ್ಲಿ ಸೌಹಾರ್ದ ನಡೆ ನಡೆಸಿದ್ದು, ಜನತೆಯಲ್ಲಿ ವಿಶ್ವಾಸ ಮೂಡಿಸಿದೆ.

4 ಅರೆ ಸೇನಾಪಡೆ ತುಕಡಿ, ಜಿಲ್ಲಾ ಸಶಸ್ತ್ರ ಪಡೆಯ ತುಕಡಿ ಸೇರಿದಂತೆ ಒಟ್ಟು 2500 ಪೊಲೀಸ್‌ ಅಧಿಕಾರಿಗಳು ಮತ್ತು ಪೊಲೀಸ್‌ ಪೇದೆಯನ್ನು ನಿಯೋಜಿಸಲಾಗಿದೆ. 66 ಸಂಚಾರಿ ದಳವನ್ನು ನಿಯೋಜಿಸಲಾಗಿದ್ದು, 13 ಚೆಕ್‌ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ.

ಮೈಕ್ರೋ ವೀಕ್ಷಕರು, 19 ಎಂಸಿಸಿ ತಂಡಗಳು, ಪೊಲೀಸ್‌ ಇಲಾಖೆಯ ಸಹಯೋಗದೊಂದಿಗೆ 18 ಸೆಕ್ಟರ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. 10 ರಿಂದ 12 ಮತಗಟ್ಟೆಗಳಿಗೆ ಒಬ್ಬ ಸೆಕ್ಟರ್ ಅಧಿಕಾರಿಯನ್ನು ನೇಮಕ ಮಾಡಲಾಗಿದ್ದು, ಜಿಲ್ಲೆಯ ಎಲ್ಲಾ ತಹಶಿಲ್ದಾರರನ್ನೂ ಹಾಗು ಸಹಾಯಕ ಆಯುಕ್ತರನ್ನು ಎಂಸಿಸಿ ತಂಡಗಳೊಂದಿಗೆ ನಿಯೋಜಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+