ಸೊಸೆ ಮೇಲೆ ಮಾಜಿ ಜಿಲ್ಲಾಧಿಕಾರಿಯಿಂದ ಲೈಂಗಿಕ ಕಿರುಕುಳ
ಭೂಪಾಲ್,
ನ. 28: ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ 'ಮಾಜಿ ಜಿಲ್ಲಾಧಿಕಾರಿ ತನ್ನ ಮೇಲೆ ಲೈಂಗಿಕ ಕಿರುಕುಳ ನಡೆಸಿದ್ದಾರೆ' ಎಂದು ಅವರ ಸೊಸೆ ಪೊಲೀಸರಿಗೆ ದೂರು ನೀಡಿದ್ದು, ಇದಕ್ಕೆ ಸಾಕ್ಷಿಯಾಗಿ ಮೊಬೈಲ್ ವಿಡಿಯೋ ಚಿತ್ರೀಕರಣವನ್ನು ನೀಡಿದ್ದಾರೆ. id="toptextpromo">ಅಖಿಲೇಶ್
ಗೌತಂ ಎಂಬುವರ ಪತ್ನಿ ಗೀತಾಂಜಲಿ ಈ ದೂರು ದಾಖಲಿಸಿದ್ದು, ಮಾವ ರಘುನಂದನ್ ಗೌತಮ್ ಜತೆಗೆ ತನ್ನ ಮೈದುನ ಕೌಶಲ್ ಗೌತಂ ಅವರನ್ನೂ ಸಹ ಆರೋಪಿಯನ್ನಾಗಿ ಮಾಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ದೂರು
ಸ್ವೀಕರಿಸಿದ ಪೊಲೀಸರು ಆಕೆಯ ಮಾವ ಮತ್ತು ಮೈದುನನ ವಿರುದ್ಧದ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಾರತೀಯ ದಂಡ ಸಂಹಿತೆ ಸೆಕ್ಷನ್ 354ರ ಅಡಿ (ಮಹಿಳೆಯ ಮೇಲೆ ದೌರ್ಜನ್ಯ ಮತ್ತು ಮಹಿಳೆಯ ಗೌರವಕ್ಕೆ ಚ್ಯುತಿ ತರುವ ಪ್ರಯತ್ನ) ಪ್ರಕರಣ ದಾಖಲಾಗಿದೆ ಎಂದು ಕೊತ್ವಾಲಿ ಪೊಲಸ್ ಠಾಣೆಯ ಮುಖ್ಯಸ್ಥ ದಿಲೀಪ್ ಯಾದವ್ ಸುದ್ದಿಗಾರರಿಗೆ ಭಾನುವಾರ ತಿಳಿಸಿದ್ದಾರೆ.











Click it and Unblock the Notifications