ಸೆಕ್ಸ್ ಮಾಡುತ್ತಾ ಯುವತಿಯರ ಲೂಟಿ ಮಾಡುತ್ತಿದ್ದವನಿಗೆ ಸಜೆ
ಬೀಜಿಂಗ್,
ನ. 28: ಸುಮಾರು 11 ಯುವತಿಯರ ಜತೆ ಸೆಕ್ಸ್ ಮಾಡಿದ್ದೂ ಅಲ್ಲದೆ ಅವರಿಂದ ಹಣ ಮತ್ತು ಬೆಲೆಬಾಳುವ ವಸ್ತುಗಳನ್ನೂ ದೋಚುತ್ತಿದ್ದ ವ್ಯಕ್ತಿಗೆ ಮೂರು ವರ್ಷ ಜೈಲುವಾಸ ವಿಧಿಸಲಾಗಿದೆ. ಸುಮಾರು 2,360 ಡಾಲರ್ ಹಣ ಮತ್ತು ದುಬಾರು ಮೊಬೈಲ್ ಸೆಟ್ ಗಳನ್ನು ಆರೋಪಿ ದೋಚಿದ್ದ. id="toptextpromo">ಹ್ಯಾನ್
ಎಂಬ ಈ ವ್ಯಕ್ತಿ 2007ರಿಂದಲೂ ಮಾದದ್ರವ್ಯ ವ್ಯಸನಿಯಾಗಿದ್ದ. ಈ ಗೀಳಿನಿಂದಾಗಿ ಹ್ಯಾನ್ ಮಾಡಬಾರದ್ದನ್ನೆಲ್ಲ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಕಂಪ್ಯೂಟರ್ ಶಿಕ್ಷಿತನೂ ಆಗಿದ್ದ ಈತ ಇಂಟರ್ನೆಟ್ ಮೂಲಕ ಯುವತಿಯರ ಸಂಗ ಬೆಳೆಸುತ್ತಿದ್ದ. ನಂತರ ಡೇಟಿಂಗ್ ಮಾಡೋಣ ಬಾ ಎಂದು ಅವರನ್ನು ಪುಸಲಾಯಿಸುತ್ತಿದ್ದ. id='are-slot-1' class='oiad oi-axt oiadv'> id='top-searched-articles'>ತಾನು
ಶ್ರೀಮಂತ ಮನೆತನದವನೆಂದು ಹೇಳಿಕೊಂಡು ಯುವತಿಯರನ್ನು ಮರುಳು ಮಾಡುತ್ತಿದ್ದ. ಹಾಗೆ ಇಂಟರ್ನೆಟ್ ಮೂಲಕ ಗೆಳತಿಯಾದವರನ್ನು ರಾತ್ರಿ ಹೊತ್ತು ಹೋಟೆಲಿಗೆ ಕರೆದೊಯ್ಯುತ್ತಿದ್ದ. ಅಲ್ಲಿ ಸೆಕ್ಸ್ ಮಾಡಿದ ನಂತರ ಬೆಳಗಿನ ಜಾವವೇ ಸದ್ದಿಲ್ಲದೆ ಜಾಗ ಖಾಲಿ ಮಾಡುತ್ತಿದ್ದ. ಹೋಗುವ ಮುನ್ನ ಉಂಡೂ ಹೋದ ಕೊಂಡೂ ಹೋದ ಎಂಬಂತೆ ಯುವತಿಯ ಬಳಿ ಇದ್ದಬದ್ದದ್ದನ್ನೆಲ್ಲ ಹೊತ್ತೊಯ್ಯುತ್ತಿದ್ದ.











Click it and Unblock the Notifications