ಪತಿಯನ್ನು ಕೊಂದು ಬಾಣಲೆಗೆ ಹಾಕಿದ ಪತ್ನಿ

man kills husband, Karachi
ಕರಾಚಿ, ನ.25: ಆಕೆ ಹೆಸರು ಜೈನಬಿ ಬೀಬಿ. ವಯಸ್ಸು 32. ಆಕೆ ಮಾಡಿರುವ ಪಾತಕ ಕಂಡು ಕರಾಚಿ ನಗರ ಬೆಚ್ಚಿದೆ. ಇನ್ನೊಬ್ಬಳನ್ನು ಕಟ್ಟಿಕೊಳ್ಳಲು ಯತ್ನಿಸಿದ ಕಾರಣಕ್ಕೆ ತನ್ನ ಪತಿಯನ್ನು ಕೊಂದು ಆತನ ಶವವನ್ನು ಬಾಣಲೆಯಲ್ಲಿ ಹಾಕಿ ಹುರಿಯಲು ಯತ್ನಿಸಿ, ವಿಫಲಳಾಗಿದ್ದಾಳೆ.

ಬೀಬಿ ಹಾಗೂ ಆಕೆ ಕಸಿನ್ ಜಹೀರ್ ಎಂಬ 22 ವರ್ಷದ ಯುವಕನನ್ನು ಶಾ ಫೈಸಲ್ ಕಾಲೋನಿ, ದಕ್ಷಿಣ ಕರಾಚಿಯಲ್ಲಿ ಬಂಧಿಸಲಾಗಿದೆ. ಪಾತ್ರೆ ತುಂಬಿಸಿಟ್ಟಿದ್ದ ಬೀಬಿ ಪತಿಯ ದೇಹದ ತುಂಡುಗಳನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಪಾಕಿಸ್ತಾನದ ಟಿವಿ ಮಾಧ್ಯಮಗಳಲ್ಲಿ ಶವವನ್ನು ಬೇಯಿಸಲು ತಯಾರಾದ ಬೀಬಿಯ ವಿಡಿಯೋ ಚಿತ್ರಣಗಳು ಪ್ರಸಾರಗೊಂಡಿತ್ತು. ಬೀಬಿ ಮಾಡಿರುವ ಈ ಕೃತ್ಯಕ್ಕೆ ಎರಡು ಕಾರಣಗಳಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.

ಸಾಕ್ಷ್ಯಾಧಾರ ನಾಶಕ್ಕೆ ಮುಂದಾಗಿರಬಹುದು ಜೊತೆಗೆ ತನ್ನ ಬಿಟ್ಟೂ ಮತ್ತೊಬ್ಬಳನ್ನು ಮದುವೆಯಾಗಲು ಮುಂದಾಗಿದ್ದು ಬೀಬಿಯನ್ನು ರೊಚ್ಚಿಗೆಬ್ಬಿಸಿತ್ತು ಎನ್ನಲಾಗಿದೆ.

ಇಸ್ಲಾಮಿನ ಮದುವೆ ಕಾನೂನಿನ ಪ್ರಕಾರ, ಮೊದಲ ಹೆಂಡತಿಯ ಅನುಮತಿ ಇಲ್ಲದೆ ಇನ್ನೊಬ್ಬಳನ್ನು ವರಿಸುವಂತಿಲ್ಲ. ಮೊದಲ ಪತ್ನಿ ನಿರಾಕರಿಸಿದರೆ ಅಲ್ಲಿಗೆ ಕಥೆ ಮುಗಿಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+