'ಪಾರ್ಟಿ ಅನಿಮಲ್' ಸೈರಸ್ ಮಿಸ್ತ್ರಿ ಟಾಟಾಗೆ ತಕ್ಕ ಮೇಸ್ತ್ರಿ

ಮುಂಬೈ, ಲಂಡನ್, ಪೂನಾ ಹೀಗೆ ಅನೇಕ ಕಡೆ ಮನೆಗಳನ್ನು ಹೊಂದಿರುವ ಸೈರಸ್ ಮಿಸ್ತ್ರಿ, 82 ವರ್ಷದ ರತನ್ ಗೆ ಮತ್ತೂ ಒಂದು ವಿಷಯದಲ್ಲಿ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಾರೆ. ಏನಪಾ ಅಂದರೆ, ಹೈಸ್ಕೂಲಿನಲ್ಲಿ ಓದುತ್ತಿರುವ ಇಬ್ಬರು ಗಂಡು ಮಕ್ಕಳ ತಂದೆ ಮಿಸ್ತ್ರಿ ಪಕ್ಕಾ ಫ್ಯಾಮಿಲಿ ಮ್ಯಾನ್.
ಅಂದಹಾಗೆ ರತನ್ ಸೋದರ (ಬಹುತೇಕ ಎಲ್ಲರೂ ಈತನೇ ರತನ್ ಉತ್ತರಾಧಿಕಾರಿ ಎಂದು ತಿಳಿದಿದ್ದರು) ಮಿಸ್ತ್ರಿಯ ಕಿರಿಯ ಸೋದರಿ ಆಲೂ ಅವರನ್ನೇ ಮದುವೆಯಾಗಿರುವುದು! ಇದರ ಹೊರತಾಗಿ ಸೈರಸ್ ಮಿಸ್ತ್ರಿಗೂ ರತನ್ ಗೂ ಬಹಳಷ್ಟು ಸಾಮ್ಯವಿದೆ- ಇಬ್ಬರೂ ಮೆಲು ಮಾತುಗಾರರು. ಶ್ರೀಮಂತಿಕೆಯ ಜಂಭವೂ ಇಲ್ಲ.
ಲಂಡನ್‌ನ ಇಂಪಿರಿಯಲ್ ಕಾಲೇಜಿನಿಂದ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರುವ ಸೈರಸ್ ಮಿಸ್ತ್ರಿ, ಲಂಡನ್‌ನ ಬಿಸಿನೆಸ್ ಸ್ಕೂಲ್‌ನ ಆಡಳಿತ ನಿರ್ವಹಣೆ ಸ್ನಾತಕೋತ್ತರ ಪದವೀಧರರೂ ಹೌದು. ಸೈರಸ್ ಮಿಸ್ತ್ರಿ ಅಪ್ಪಾನೂ 7.6 ಶತಕೋಟಿ ಡಾಲರ್ ಮೌಲ್ಯದ ಖ್ಯಾತ ನಿರ್ಮಾಣ ಕಂಪನಿಯ ಒಡೆಯರು. ಆದರೆ ಸೈರಸ್ ಮಿಸ್ತ್ರಿ ಹೆಚ್ಚಾಗಿ ಆ ಸಂಸ್ಥೆಯೊಂದಿಗೆ ಗುರಿತಿಸಿಕೊಂಡಿಲ್ಲ. ಅವರ ನಿಷ್ಠೆ ಏನಿದ್ದರೂ ಟಾಟಾ ಸಮೂಹಕ್ಕೇ. ಸೋ, ಸೈರಸ್ ಮಿಸ್ತ್ರಿ ಸಾರಥ್ಯದಲ್ಲಿ ಟಾಟಾ ಸಮೂಹ ಇನ್ನೂ ಎತ್ತರೆತ್ತರಕ್ಕೆ ಬೆಳೆಯಲಿ.












Click it and Unblock the Notifications