Get Updates
Get notified of breaking news, exclusive insights, and must-see stories!

ಲಿವ್ ಇನ್ ಪಾರ್ಟ್ನರ್ ನನ್ನ ರೇಪ್ ಮಾಡ್ಬಿಟ್ಟ

ಮುಂಬೈ, ನ.24: ಪರಸ್ಪರ ನಂಬುಗೆಯಿಂದ ಲಿವ್ ಇನ್ ಸಂಬಂಧದಲ್ಲಿದ್ದೆವು. ಆದರೆ, ನನ್ನ ಪಾರ್ಟ್ನರ್ ವಿರಳ್ ಪರೇಖ್(31) ನನ್ನ ರೇಪ್ ಮಾಡಿಬಿಟ್ಟ ಎಂದು ಯುವತಿಯೊಬ್ಬಳು ಪೊಲೀಸರ ಮುಂದೆ ಗೋಳು ತೋಡಿಕೊಂಡಿದ್ದಾಳೆ.

ಹೈದರಾಬಾದ್ ಮೂಲದ ಯುವತಿ ಹಾಗೂ ಮುಂಬೈ ಮೂಲದ ಪರೇಖ್ ಜೊತೆಜೊತೆಗೆ ಜೀವಿಸುತ್ತಿದ್ದು. ಇಬ್ಬರು ದುಬೈನಲ್ಲಿ ಒಂದೇ ಕಂಪನಿಯಲ್ಲಿ ಕೆಲಸದಲ್ಲಿದ್ದರು. ಹಾಗಾಗಿ 2006ರಿಂದ ಒಂದೇ ಅಪಾರ್ಟ್ ಮೆಂಟ್ ನಲ್ಲಿ ಜೊತೆಗಿದ್ದರು.

ಕಥೆ ಸಿಕ್ಕಿತ್ತು ತಿರುವು: ಆದರೆ, 2010ರಲ್ಲಿ ತಂಗಿ ಮದುವೆಗೆಂದು ಮುಂಬೈಗೆ ಬಂದಿದ್ದ ಪರೇಖ್, ತನ್ನ ಮದುವೆಯನ್ನು ಮುಗಿಸಿಕೊಂಡು ದುಬೈಗೆ ತೆರಳಿದ್ದ. ಆದರೆ, ಈ ವಿಷಯವನ್ನು ತನ್ನ ಲಿವ್ ಇನ್ ಪಾರ್ಟ್ನರ್ ಗೆ ಹೇಳದೆ ಮುಚ್ಚಿಟ್ಟಿದ್ದ.

ಕೆಲವು ತಿಂಗಳ ನಂತರ ಪರೇಖ್ ತನ್ನ ಲಿವ್ ಇನ್ ಸಂಬಂಧ ಕೊನೆಗೊಳಿಸಲು ಯತ್ನಿಸಿದ್ದಾನೆ. ಈ ಸಮಯದಲ್ಲಿ ಹೈದರಾಬಾದಿ ಯುವತಿ ತನ್ನನ್ನು ಮದುವೆಯಾಗು ಎಂದು ಆತನನ್ನು ಪೀಡಿಸಿದ್ದಾಳೆ. ಇಬ್ಬರ ಜಾತಿಗಳು ಬೇರೆ ಬೇರೆ ಮನೆಯಲ್ಲಿ ಒಪ್ಪಲ್ಲ ಎಂದು ನಿರಾಕರಿಸಿದ್ದಾನೆ.

ಆದರೆ, ಯುವತಿಯ ರೋದನೆ ಹೆಚ್ಚಾದಾಗ ಮದುವೆ ವಿಷಯ ಹೊರ ಹಾಕಿದ್ದಾನೆ. ಸಾಧ್ಯವಾದರೆ, ಪತ್ನಿಗೆ ವಿಚ್ಛೇದನ ನೀಡಿ ನಿನ್ನನ್ನು ವರಿಸುತ್ತೇನೆ ಎಂದು ಭರವಸೆ ನೀಡಿದ್ದಾನೆ. ಆದರೆ, ಆ ರೀತಿ ಏನೂ ನಡೆಯಲಿಲ್ಲ.

ಲಿವ್ ಇನ್ ಪಾರ್ಟ್ನರ್ ಪ್ರಾಬ್ಲಂ ನಲ್ಲದ್ದ ಪರೇಖ್ ಗೆ ಅವನ ಕುಟುಂಬದವರು ಬುದ್ಧಿ ಹೇಳಿದ್ದಾರೆ. ಹೈದರಾಬಾದಿ ಯುವತಿ ಕುಟುಂಬ ಪರೇಖ್ ವಿರುದ್ಧ ಬೊರಿವಿಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಪರೇಖ್ ಲ್ಯಾಪ್ ಟಾಪ್ ನಲ್ಲಿ ಯುವತಿಯ ನಗ್ನ ಚಿತ್ರಗಳು ಸಿಕ್ಕಿದೆ. ಇಬ್ಬರು ಜೊತೆಗಿದ್ದರು, ಮಲಗಿದ್ದರು ಎರಡು ಮೂರು ಸಾರಿ ಆಕೆಗೆ ಗರ್ಭಸ್ರಾವ ಆಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.

ಆದರೆ, ಯುವತಿ ಮಾತ್ರ ನನ್ನನ್ನು ಆತ ರೇಪ್ ಮಾಡಿದ್ದಾನೆ ಕ್ರಮ ಕೈಗೊಳ್ಳಿ ಎಂದು ದುಂಬಾಲು ಬಿದ್ದಿದ್ದಾಳೆ. ಇಬ್ಬರ ನಡುವೆ ಸಹಮತ ಸೆಕ್ಸ್ ಇರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ತನಿಖೆ ಜಾರಿಯಲ್ಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+