ನಗ್ನ ಚಿತ್ರಗಳು ಜಾಹೀರಾತುದಾರರಿಗೆ ಹೇಗೆ ಉದ್ರೇಕಕಾರಿ!?

ಈ ನಗ್ನ ಚಿತ್ರಗಳ ಸಮೀಕ್ಷೆ ಅತ್ಯಂತ ಕುತೂಹಲಕಾರಿಯಾಗಿದೆ. ವಿದ್ಯುತ್ ತರಂಗಗಳಿಗಿಂತಲೂ ವೇಗವಾಗಿ ಪ್ರತಿಕ್ರಿಯಿಸುವ ಪುರುಷರ ಮೆದುಳಿನ ಮೇಲೆ ನಿಗಾಯಿಡಲಾಗಿತ್ತು. ನಗ್ನ ದೇಹದ ಸುರಸುಂದರಿಯ ಚಿತ್ರವನ್ನು ಪುರುಷರ ಮುಂದಿಟ್ಟಾಗ ಅವರ ಮೆದುಳು 0.2 ಸೆಕೆಂಡಿಗಿಂತ ವೇಗವಾಗಿ ಆ ಚಿತ್ರಗಳು ಅವರ ಮೆದುಳಿನಲ್ಲಿ ಪ್ರತಿಬಿಂಬಿತವಾಗುತ್ತವೆ.
ಆದರೆ ಸ್ವಿಮ್ ಸೂಟ್ ಧರಿಸಿದ ಅಥವಾ ಅರೆ ನಗ್ನ ಅಥವಾ ಸಂಪೂರ್ಣವಾಗಿ ಬೆತ್ತಲಾಗದ ಸುಂದರಿಯರ ಫೋಟೋಗಳನ್ನು ನೋಡಿದಾಗ ಅಷ್ಟೊಂದು ವೇಗವಾಗಿ ಪ್ರತಿಕ್ರಿಯಿಸುವುದಿಲ್ಲ. ಸ್ವಲ್ಪ ನಿಧಾನವಾಗಿ ಆ ಚಿತ್ರಗಳು ಪುರುಷರ ಚಿತ್ತಾಕರ್ಷಕವಾಗಿರುತ್ತವೆ.
ಇದನ್ನೇ ಆಧಾರವಾಗಿಟ್ಟುಕೊಂಡು ಪಾರದರ್ಶಕ ಉಡುಗೆತೊಟ್ಟ ಅಥವಾ ಅರೆನಗ್ನ ರೂಪದರ್ಶಿಯ ಫೋಟೋ ತೋರಿಸಿ, ಜಾಹೀರಾತುದಾರರು ಪುರುಷ ಗ್ರಾಹಕರನ್ನು ಸೆಳೆಯುವುದು ರಹಸ್ಯವೇನೂ ಅಲ್ಲ. ಅಂದರೆ ರೂಪದರ್ಶಿಯರಿಗೆ ಕಡಿಮೆ ಬಟ್ಟೆ ತೋರಿಸಿ, ಜಾಹೀರಾತುದಾರರು ತಮ್ಮ ಸರಕಿನ ಮಾರಾಟಕ್ಕೆ ಅಂಟಿಕೊಳ್ಳುತ್ತಾರೆ ಎಂಬುದು ಬೆತ್ತಲಾಗಿದೆ.












Click it and Unblock the Notifications