ರೈಲ್ವೆ ಟಿಕೆಟ್ ಖರೀದಿಗೆ ಹೊಸ ತತ್ಕಾಲ್ ನಿಯಮ

ತತ್ಕಾಲ್ ಟಿಕೆಟ್ ವಿತರಣೆ ಅವಧಿಯನ್ನು ಈ ಹಿಂದಿನ 48 ಗಂಟೆಗೆ ಬದಲಾಗಿ 24 ಗಂಟೆಗಳಲ್ಲಿ ನೀಡಲಾಗುವುದೆಂದು ಭಾರತೀಯ ರೈಲ್ವೆ ಪ್ರಕಟಣೆ ತಿಳಿಸಿದೆ. ಆದರೆ ತತ್ಕಾಲ್ ಟಿಕೆಟ್ ರದ್ದು ಮಾಡಿದರೆ ಹಣವಾಪಸ್ ಮಾಡಲಾಗುವುದಿಲ್ಲವೆಂದು ಪ್ರಕಟಣೆ ತಿಳಿಸಿದೆ.
ಒಂದು ತತ್ಕಾಲ್ ಪಿಎನ್ಆರ್ ನಲ್ಲಿ ಗರಿಷ್ಠ 4 ಟಿಕೆಟ್ ಮಾತ್ರ ಖರೀದಿಸಬಹುದು. ಐಡೆಂಟೆಟಿ ದಾಖಲೆ ಜೊತೆಗಿದ್ದರೆ ಮಾತ್ರ ತತ್ಕಾಲ್ ಟಿಕೇಟ್ ನೀಡಲಾಗುವುದು. ಆದರೆ ಪೂರ್ವಾಹ್ನ 8 ಗಂಟೆಯಿಂದ ಪೂರ್ವಾಹ್ನ ಹತ್ತುಗಂಟೆಯವರೆಗೆ ತತ್ಕಾಲ್ ಟಿಕೇಟ್ ಬುಕ್ ಮಾಡದಂತೆ ತಡೆಯಲಾಗಿದೆ.
"ತತ್ಕಾಲ್ ಟಿಕೆಟ್ ತುರ್ತು ಪ್ರಯಾಣಕ್ಕೆ ನೆರವಾಗುತ್ತದೆ. ಅಂದರೆ ಯೋಜಿತವಲ್ಲದ ಪ್ರಯಾಣಕ್ಕೆ ಇದು ಅನುಕೂಲ. ಆದರೆ ಇದು ದುರ್ಬಳಕೆಯಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ" ಎಂದು ರೈಲ್ವೆ ಸಚಿವ ದಿನೇಶ್ ತ್ರಿವೇದಿ ಹೇಳಿದ್ದಾರೆ.












Click it and Unblock the Notifications