ಕಾಂಡೋಮ್ ಕೊಳ್ಳುವುದರಲ್ಲಿ ಬೆಂಗಳೂರಿಗರೇ ಕಿಂಗ್!

ಅದರಲ್ಲೂ, ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಯುವಕರು ಕಾಂಡೋಮ್ ಕೊಳ್ಳುವುದರಲ್ಲಿ ದೇಶಕ್ಕೆ ತಾವೇ ಕಿಂಗ್ ಎಂದು ತೋರಿಸಿದ್ದಾರೆ. ಬೆಂಗಳೂರಿನ ಕೋರಮಂಗಲ, ಬನ್ನೇರುಘಟ್ಟ ರಸ್ತೆ, ಜಯನಗರ, ಎಲೆಕ್ಟ್ರಾನಿಕ್ ಸಿಟಿ, ವೈಟ್ ಫೀಲ್ಡ್ ಪ್ರದೇಶಗಳಿಂದ ಕಾಂಡೋಮ್ ಗಾಗಿ ಹೆಚ್ಚೆಚ್ಚು ಆರ್ಡರ್‌ಗಳು ಬರುತ್ತಿವೆ.
ಇದನ್ನು ಹೇಳಿದ್ದು condomking.in ಎಂಬ ವೆಬ್‌ಸೈಟಿನ ಸಿಇಓ ಆಗಿರುವ ರಮೇಶ್ ಶ್ರೀನಿವಾಸ್ ಎಂಬುವವರು. ಅವರು ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಕಾಂಡೋಮ್ ವ್ಯಾಪಾರ ವಹಿವಾಟು ಮತ್ತು ಟ್ರೆಂಡ್ ಬಗ್ಗೆ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
ಕೊಳ್ಳುವುದು ಆನ್‌ಲೈನ್ ಆಗಿರುವುದರಿಂದ ಜನರು ನಿರ್ಭಿಡೆಯಿಂದ ಕೊಳ್ಳುವ ಉತ್ಸಾಹ ತೋರುತ್ತಿದ್ದಾರೆ. ಆರಂಭದಲ್ಲಿ ವಾರಕ್ಕೆ ಒಂದು ಕಾಂಡೋಮ್ ಮಾರಾಟವಾಗುತ್ತಿದ್ದರೆ, ಈಗ ದಿನಕ್ಕೆ 10ರಿಂದ 15 ಬೇಡಿಕೆಗಳು ಬರುತ್ತಿವೆ. ಗಂಡಸರು ಮಾತ್ರವಲ್ಲ ಹೆಂಗಸರು ಕೂಡ ಫಿಮೇಲ್ ಕಾಂಡೋಮ್ ಕೊಳ್ಳುತ್ತಿದ್ದಾರೆ ಅಂತಾರೆ ಶ್ರೀನಿವಾಸ್.
ಯುರೋಪ್‌ನ ನಂ.1 ಕಾಂಡೋಮ್ ಲವ್ ಲೈಟ್ಸ್‌ಗೆ ಹೆಚ್ಚಿನ ಬೇಡಿಕೆಯಿದೆ. ಭಾರತೀಯ ಬ್ರಾಂಡ್‌ಗಳಾಂದ ಕಾಮಸೂತ್ರ ಮತ್ತು ಮೂಡ್ಸ್‌ಗೂ ಸಾಕಷ್ಟು ಬೇಡಿಕೆಯಿದೆ. ಇವು ಚಿಕ್ಕವು. ದೊಡ್ಡ ಕಾಂಡೋಮ್‌ಗಾಗಿ ಬೇಡಿಕೆ ಬಂದರೆ ಯುರೋಪ್‌ನಿಂದಲೇ ತರಿಸಬೇಕಾಗುತ್ತದೆ ಎನ್ನುತ್ತಾರೆ ರಮೇಶ್ ಶ್ರೀನಿವಾಸ್.












Click it and Unblock the Notifications