ಪತ್ನಿ ಹೆಸರಲ್ಲಿ ಭೂಮಿ ನುಂಗಿದ ಶಾಸಕ ಸಿಟಿ ರವಿ?

ಇಲ್ಲಿನ ಕೆಎಚ್‌ಬಿ ಕಾಲೋನಿಯ ತೃತೀಯ ಹಂತದಲ್ಲಿ ಕರ್ನಾಟಕ ಹೌಸಿಂಗ್ ಬೋರ್ಡಿನಿಂದ ಮೂರು ನಿವೇಶನ ಪಡೆದುಕೊಂಡಿರುವ ಅಕ್ರಮದ ಬಗ್ಗೆ ಚಿಕ್ಕಮಗಳೂರು ನಗರ ಪಾಲಿಕೆ ಸದಸ್ಯ ದೇವಿಪ್ರಸಾದ್ ಅವರು ಸಲ್ಲಿಸಿದ ಆರ್ ಟಿಐ ಅರ್ಜಿ ಮೂಲಕ ತಿಳಿದುಬಂದಿದೆ.
ಶಿಕ್ಷಣ ಟ್ರಸ್ಟ್ ಅಸ್ತಿತ್ವದಲ್ಲೇ ಇಲ್ಲ. ಟ್ರಸ್ಟ್ ಹೆಸರಲ್ಲಿ ಸಿಎ ಸೈಟು ಪಡೆದಿರುವುದು ಸುಳ್ಳಲ್ಲ ಎಂದು ತಿಳಿದುಬಂದಿದೆ.
ಈ ನಿವೇಶನ ಪಡೆಯುವಲ್ಲಿ ಅಸ್ತಿತ್ವದಲ್ಲಿರದ ಶಿಕ್ಷಣ ಸಂಸ್ಥೆಯೊಂದರ ಅಧ್ಯಕ್ಷೆ ಎಂದು ಹೇಳಿಕೊಂಡಿದ್ದಾರೆ. ಚಿಕ್ಕಮಗಳೂರು ಅಸೆಂಬ್ಲಿ ಕ್ಷೇತ್ರ ಜನಪ್ರತಿನಿಧಿ ಸಿಟಿ ರವಿ ಅವರ ಪತ್ನಿ ಪಲ್ಲವಿ ಹೆಸರಿಗೆ ಮೂರು CA ಸೈಟು ಪರಭಾರೆಯಾಗಿದೆ.
6,953.54 ಚ.ಅಡಿ ಇರುವ ನಂ.6ಎ, 7,319 ಚ.ಅ ಇರುವ ನಂ.6ಬಿ ಹಾಗೂ 15,725 ಚ.ಅ ಇರುವ ನಿವೇಶನ ಸಂಖ್ಯೆ 8 ಪಲ್ಲವಿ ಹೆಸರಿಗೆ ಮಂಜೂರಾಗಿದೆ.
ವಿಜಯಪುರದ ಶ್ರೀ ಆಂಜನೇಯ ಶಿಕ್ಷಣ ಟ್ರಸ್ಟ್ ಅಧ್ಯಕ್ಷೆಯಾಗಿರುವ ಪಲ್ಲವಿ ಹೆಸರಿಗೆ ಲೀಸ್ ಕಮ್ ಸೆಲ್ ಕ್ರಯ ಪತ್ರ ನೋಂದಣಿಯಾಗಿದೆ.
2007ರ ಅಕ್ಟೋಬರ್ 24ರಂದು ಕರ್ನಾಟಕ ಗೃಹ ಮಂಡಳಿಗೆ 6.29 ಲಕ್ಷ ರೂ ಪಾವತಿಸಿರುವ ಬಗ್ಗೆ ದಾಖಲೆ ಸಿಕ್ಕಿದೆ. ನಿವೇಶನ ಸಂಖ್ಯೆ 8 ಕ್ಕೆ 6.29 ಲಕ್ಷ ರೂ, ನಿವೇಶನ ಸಂಖ್ಯೆ 6ಎಗೆ 2.78 ಲಕ್ಷ ರೂ ಹಾಗೂ ನಿವೇಶನ ಸಂಖ್ಯೆ 6ಬಿಗೆ 2.92 ಲಕ್ಷ ರೂ ನೀಡಲಾಗಿದೆ.
ಆದರೆ ಈ ಜಾಗ ಪಡೆಯಲು ಆಕೆ ಸುಳ್ಳು ಕಾರಣ (ಸೊಸೈಟಿ / ಟ್ರಸ್ಟ್) ಕಾರಣ ನೀಡಿದ್ದಾರೆ.
ಈ ಜಾಗ ಯಾರಿಗೂ ಮಾರಾಟ ಮಾಡುವಂತಿಲ್ಲ ಹಾಗೂ ಉದ್ದೇಶಿತ ಕೆಲಸಕ್ಕೆ ಜಾಗ ವಿನಿಯೋಗವಾಗದಿದ್ದರೆ ತಕ್ಷಣ ಕೆಎಚ್‌ಬಿಗೆ ಹಿಂದಿರುಗಿಸಬೇಕು ಎಂದು ರವಿ ಪತ್ನಿಗೆ ಸೂಚಿಸಲಾಗಿತ್ತು.
ಆದರೆ ಆಕೆ ಈ ಜಾಗದಲ್ಲಿ ಶಿಕ್ಷಣ ಸಂಸ್ಥೆ ಹೆಸರಲ್ಲಿ ಖಾಸಗಿ ಕಟ್ಟಡ ನಿರ್ಮಾಣ ಯೋಜನೆ ರೂಪಿಸಿದ್ದಾರೆ.
ಇದೇ ರೀತಿ ಆಕೆ ಸೈಟ್ ನಂಬರ್ 113 ಮತ್ತು 114 (ಕೆಎಚ್‌ಬಿ ಕಾಲೋನಿ ಎಂಐಜಿ 2ನೇ ಸ್ಟೇಜಿನಲ್ಲಿ) ಜಾಗದಲ್ಲೂ ಇದೇ ಉದ್ದೇಶಕ್ಕಾಗಿ ಪ್ರಮಾಣ ಪತ್ರ ನೀಡಿ ಪಡೆಯಲು ಪ್ರಯತ್ನಿಸಿದ್ದಾರೆ ಎಂದು ದಾಖಲೆ ಸ್ಪಷ್ಟಪಡಿಸುತ್ತದೆ.












Click it and Unblock the Notifications