ರೇಷನ್ ಕಾರ್ಡ್ ಬೇಕಿದ್ದರೆ ಆನ್‌ಲೈನ್ ಮುಖಾಂತರ ಸಲ್ಲಿಸಿ

Apply for ration card online : Shobha Karandlaje
ಬೆಂಗಳೂರು, ನ. 19 : ನಕಲಿ ರೇಷನ್ ಕಾರ್ಡುದಾರರನ್ನು ಮಟ್ಟಹಾಕುವ ಉದ್ದೇಶದಿಂದ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಆಹಾರ ಮತ್ತು ನಾಗರಿಕ ಸರಬರಾಜು ಸಚಿವೆ ಶೋಭಾ ಕರಂದ್ಲಾಜೆ ಅವರು ಆನ್ ಲೈನ್ ಮುಖಾಂತರ ಕಾರ್ಡಿಗೆ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ಶನಿವಾರ, ನ.19ರಿಂದ ಜಾರಿ ಮಾಡಲಿದ್ದಾರೆ.

ರೇಷನ್ ಕಾರ್ಡ್ ಇಲ್ಲದ, ಬಡತನ ರೇಖೆಗಿಂತ ಮೇಲಿರುವ ಮತ್ತು ಕೆಳಗಿರುವ ನಗರ ಮತ್ತು ಗ್ರಾಮೀಣ ಜನತೆ ಆನ್ ಲೈನ್ ಅಪ್ಲಿಕೇಷನ್ ಸಲ್ಲಿಸಬಹುದು. ರಾಜ್ಯದ ಎಲ್ಲಾ ಭಾಗಗಳಲ್ಲಿ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಇನ್ನು ಮುಂದೆ ಎಲ್ಲ ರೇಷನ್ ಕಾರ್ಡ್ ಅರ್ಜಿಯನ್ನು ಆನ್ ಲೈನ್ ಮೂಲಕವೇ ಸಲ್ಲಿಸಬೇಕು ಎಂದು ಶೋಭಾ ತಿಳಿಸಿದ್ದಾರೆ.

ಇಂಟರ್ನೆಟ್ ಅನುಕೂಲತೆ ಇರುವ ನಗರ ಪ್ರದೇಶದಲ್ಲಿರುವ ಜನತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ವೆಬ್ ಸೈಟ್ http://ahara.kar.nic.in ಮುಖಾಂತರ ಅರ್ಜಿ ಸಲ್ಲಿಸಬಹುದು. ಗ್ರಾಮೀಣ ಪ್ರದೇಶದವರು ಇಂಟರ್ನೆಟ್ ಬಗ್ಗೆ ತಿಳಿದಿಲ್ಲದಿದ್ದರೆ ಪಂಚಾಯತ್ ಕಚೇರಿಯಲ್ಲಿ ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು.

ಶೋಭಾ ಅವರ ಪ್ರಕಾರ ರಾಜ್ಯದಲ್ಲಿ ಸುಮಾರು 30 ಲಕ್ಷ ನಕಲಿ ಕಾರ್ಡುಗಳನ್ನು ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ತಪಾಸಣೆಗಳನ್ನು ನಡೆಸಿ ಎಲ್ಲ ನಕಲಿ ಪಡಿತರ ಚೀಟಿಗಳನ್ನು ಕ್ಯಾನ್ಸಲ್ ಮಾಡಲಾಗುವುದು ಎಂದು ವಿವರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+