ಶಾಲಾ ಬಾಲಕಿ ಶೌಚಕ್ಕೆ ಹೋದ್ರೆ ಕಾಯ್ತಿತ್ತು ಕಾಮ ಪಿಶಾಚಿ

ಸರೂರ್ ನಗರದ ಬೈರಮಲ್ ಗುಡದ ಬಳಿ ಇರುವ ಅಕೃತಿ ಶಾಲೆಯಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಅಮನ್ ಎಂಬುವನು ಈ ಕೃತ್ಯ ಎಸೆಗಿದ್ದಾನೆ. ಘಟನೆ ನಡೆದ ನಂತರ ಹುಡುಗಿಯ ಪೋಷಕರು ಹಾಗೂ ಸಾರ್ವಜನಿಕರು ಶಾಲೆಯ ಮುಂದೆ ನಿಂತು ಧರಣಿ ನಡೆಸಿ, ಪ್ರತಿಭಟಿಸಿದ ಘಟನೆ ನಡೆದಿದೆ.
25 ವರ್ಷದ ಅಮನ್ ಕಳೆದ ಒಂದೂವರೆ ವರ್ಷದಿಂದ ಶಾಲೆಯಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ. ಹುಡುಗಿ ಶೌಚಾಲಯಕ್ಕೆ ಎಂದು ಹೊರಟಾಗ ಹಿಂಬಾಲಿಸಿ ಕಿರುಕುಳ ನೀಡಿದ್ದಾನೆ. ಆದರೆ, ಆಕೆಯನ್ನು ಅತ್ಯಾಚಾರ ಎಸೆಗಲು ಆಗಿಲ್ಲ. ಹುಡುಗಿ ಬೊಬ್ಬೆ ಹಾಕಿ ಆತನಿಂದ ದೂರು ಓಡಿದ್ದಾಳೆ.
ಘಟನೆ ನಂತರ ಸಾರ್ವಜನಿಕರಿಂದ ಅಮನ್ ಗೆ ಸರಿಯಾದ ಗೂಸಾ ಸಿಕ್ಕಿದೆ. ದೆಹಲಿ ಮೂಲದ ಅಮನ್ ಉದ್ಯೋಗ ಅರಸಿ ಇತ್ತೀಚೆಗೆ ಹೈದರಾಬಾದಿಗೆ ಬಂದಿದ್ದ ಎನ್ನಲಾಗಿದೆ. ಪೊಲೀಸರು ಅಮನ್ ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.












Click it and Unblock the Notifications