ಪತ್ನಿಯನ್ನು ದೊಣ್ಣೆಯಿಂದ ತದುಕಿದ ಗಂಡ ಮತ್ತು ಮಾವ
ಪಡುಬಿದ್ರಿ,
ನ.19: ಪತ್ನಿ ಮೇಲೆ ಗಂಡ ಹಲ್ಲೆ ಮಾಡುವುದನ್ನು ಕೇಳಿರುತ್ತೀರಿ, ಓದಿರುತ್ತೀರಿ, ನೋಡಿರಲೂಬಹುದು. ಆದರೆ ಗಂಡ ಮತ್ತು ಮಾವ ಇಬ್ಬರೂ ಸೇರಿಕೊಂಡು ಪತ್ನಿ ಮೇಲೆ ಹಲ್ಲೆ ಮಾಡಿದರೆ ಆ ಅಸಹಾಯಕ ಹೆಣ್ಣುಮಗಳ ಪರಿಸ್ಥಿತಿ ಹೇಗಾಗಬೇಕು. id="toptextpromo">ಈ
ರೀತಿಯ ಘಟನೆಯೊಂದು ಪಡುಬಿದ್ರಿಯಲ್ಲಿ ನಡೆದಿದೆ. ಹಲ್ಲೆಗೊಳಗಾದ ಹೆಣ್ಣುಮಗಳ ಹೆಸರು ಸುಮತಿ (31). ಈಕೆ ಗಂಡ ಸದಾನಂದನೊಂದಿಗೆ ಸಾಂತೂರು ಗ್ರಾಮದ ಪಡುಮನೆ ಎಂಬಲ್ಲಿ ವಾಸಿಸುತ್ತಿದ್ದಾರೆ. ಮನೆ ಕೆಲಸದ ವಿಚಾರವಾಗಿ ಗಂಡಹೆಂಡಿರ ನಡುವೆ ಜಗಳವಾಗಿದೆ. ಇದನ್ನು ನೋಡುತ್ತಿದ್ದ ಆಕೆಯ ಮಾವ ಗುರುವ ಎಂಬುವವರು ಸಮಾಧಾನಪಡಿಸುವುದನ್ನು ಬಿಟ್ಟು, ಸೊಸೆಯನ್ನು ಕೈಯಿಂದ ಹೊಡೆದಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಅಪ್ಪನ
ಆರ್ಭಟ ನೋಡಿದ ಮಗ ಮತ್ತಷ್ಟು ರೊಚ್ಚಿಗೆದ್ದು ದೊಣ್ಣೆ ತೆಗೆದುಕೊಂಡು ಪತ್ನಿಯ ತಲೆಯ ಹಿಂಭಾಗಕ್ಕೆ, ಬೆನ್ನಿಗೆ ಹೊಡೆದಿದ್ದಾನೆ. ಮಾವ ಮತ್ತು ಗಂಡನ ದಾಳಿಯಿಂದ ತತ್ತರಿಸಿರುವ ಸುಮತಿ ಈಗ ಮೂಲ್ಕಿಸರಕಾರಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿದ್ದಾರೆ. ಈ ಸಂಬಂಧ ಪಡುಬಿದ್ರಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. (ಒನ್‌ಇಂಡಿಯಾ ಕನ್ನಡ)











Click it and Unblock the Notifications