ಮಹಿಳೆಯರೇ ಎಚ್ಚರ: ಸ್ಕರ್ಟ್ ಫೋಟೋ ತೆಗೆಯುವ ಪೋಕರಿಗಳಿದ್ದಾರೆ
ಫುಕೋಶಿಮಾ,ನ.18:
ಜಪಾನಿನಲ್ಲಿ ಹೊಸ ಪೋಕರಿಗಳ ಅವಾಂತರ ಶುರುವಾಗಿದೆ. ಅತ್ಯಾಧುನಿಕ ಡಿಜಿಟಲ್ ಕ್ಯಾಮರಾಗಳನ್ನು ಬಳಸಿ ಕೆಳಗಿನಿಂದ ಯುವತಿಯರ ಸ್ಕರ್ಟ್ ಫೋಟೊ ಮತ್ತು ವಿಡಿಯೋ ತೆಗೆಯುವ ಹಾವಳಿ ಆರಂಭವಾಗಿದೆ. ಆದ್ದರಿಂದ ಮಹಿಳೆಯರೇ ಕಟ್ಟೆಚ್ಚರ ಎಂದು ಪೊಲೀಸರು ಅವಲತ್ತುಕೊಂಡಿದ್ದಾರೆ. id="toptextpromo">ಜಪಾನಿನಲ್ಲಿ
ಚಿಕಾನ್ ಎಂಬ ಹೆಸರಿನಿಂದ ಕರೆಯಲ್ಪಡುವ ಈ ಪುರುಷ ಪುಂಗವರು ಇಂತಹ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಇತರರಿಗೆ ಹಂಚುತ್ತಿದ್ದಾರಂತೆ. ಇಂಟರ್ನೆಟ್ ಮೂಲಕ ಇಂತಹ ಕಿಡಿಗೇಡಿತನಗಳು ಹೇರಳವಾಗಿ ನಡೆಯುತ್ತಿವೆ. ಇತ್ತೀಚೆಗೆ ಇಂತಹವರ ಕಾಟ ತೀವ್ರವಾಗಿದ್ದು ನ್ಯಾಷನಲ್ ಪೊಲೀಸ್ ಏಜೆನ್ಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. id='are-slot-1' class='oiad oi-axt oiadv'> id='top-searched-articles'>ರೈಲ್ವೆ
ಸ್ಟೇಷನ್, ಎಸ್ಕಲೇಟರ್, ಪಬ್ಲಿಕ್ ಟಾಯ್ಲೆಟ್, ಬಾತ್ ರೂಂಗಳು ಮುಂತಾದ ಸಾರ್ವಜನಿಕ ಸ್ಥಳಗಳು ಕಿಡಗೇಡಿಗಳ ಇಂತಹ ಕೃತ್ಯಗಳಿಗೆ ಪ್ರಶಸ್ತವಾಗಿದೆ. ಕಳೆದ ವರ್ಷ 1,741 ಪ್ರಕರಣಗಳು ಪತ್ತೆಯಾಗಿವೆ. ಎಲ್ಲದರಲ್ಲೂ ಮಹಿಳೆಯರ ಸ್ಕರ್ಟ್ ಭಾಗಗಳನ್ನೊಳಗೊಂಡ ಫೋಟೊ ಮತ್ತು ವಿಡಿಯೋಗಳು ಸಾಕ್ಷಿಯಾಗಿ ದೊರೆತಿವೆ ಎಂದು ಪೊಲೀಸರು ತಿಳಿಸಿದ್ದಾರೆ.











Click it and Unblock the Notifications