ಬಹಿರ್ದೆಸೆಗೆ ಹೊರಟ ಮಲೆಬೆನ್ನೂರು ಹುಡುಗಿ ಕಾಣೆ
ಮಲೆಬೆನ್ನೂರು,
ನ.18: ಬಹಿರ್ದೆಸೆಗೆ ಹೋಗಿ ಬರುತ್ತೇನೆ ಎಂದು ಹೋದ ಹುಡುಗಿ ಮನೆಗೆ ವಾಪಸ್ಸು ಬಾರದೆ ನಾಪತ್ತೆಯಾದ ಪ್ರಕರಣ ಹರಿಹರ ತಾಲೂಕು ಮಲೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಾಪತ್ತೆಯಾದ ಹುಡುಗಿಯ ಹೆಸರು ಶ್ರುತಿ (17). id="toptextpromo">ಈಕೆ
ಹರಿಹರದ ಡಿ.ಆರ್.ಎಂ. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಮಲೆಬೆನ್ನೂರಿನಿಂದ ಹರಿಹರಕ್ಕೆ ಪ್ರತಿನಿತ್ಯ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಕಾಲೇಜಿಗೆ ಹೋಗಿ ಬರುತ್ತಿದ್ದರು. ಕಳೆದ 15 ದಿನಗಳಿಂದ ಹರಿಹರ ತಾಲ್ಲೂಕು ಕೊಪ್ಪ ಗ್ರಾಮದಲ್ಲಿ ಅಜ್ಜಿ ಮನೆಯಲ್ಲಿದ್ದಳು. id='are-slot-1' class='oiad oi-axt oiadv'> id='top-searched-articles'>ನವೆಂಬರ್
17ರ ರಾತ್ರಿ 7.45 ಗಂಟೆ ಸಮಯದಲ್ಲಿ ಮನೆಯಿಂದ ಹೊರಗೆ ಬಹಿರ್ದೆಸೆಗೆಂದು ಹೋದವಳು ವಾಪಾಸ್ ಮನೆಗೆ ಬಂದಿಲ್ಲ. ಕೊಪ್ಪ ಗ್ರಾಮದಲ್ಲಿ ಸಂಬಂಧಿಕರು ಹುಡುಕಿದರೂ ಹುಡುಗಿ ಪತ್ತೆಯಾಗಿರುವುದಿಲ್ಲ. ಈ ಸಂಬಂಧ ಹುಡುಗಿಯ ತಂದೆ ಬಸವರಾಜಪ್ಪ ಎಂಬುವವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. (ಒನ್‌ಇಂಡಿಯಾ ಕನ್ನಡ)











Click it and Unblock the Notifications