ನಾಯ್ಡು ಆಸ್ತಿ ಎಷ್ಟಿರಬಹುದು 1, 2, 3 ಸಾವಿರ ಕೋಟಿ?

ಎನ್ ಚಂದ್ರಬಾಬು ನಾಯ್ಡು ತನ್ನ ಹಾಗೂ ತನ್ನ ಕುಟುಂಬದ ಸಮಸ್ತ ಆಸ್ತಿ ಮೊತ್ತ 48 ಕೋಟಿ ರೂ ದಾಟುವುದಿಲ್ಲ ಎಂದು ಘೋಷಿಸಿದ್ದಾರೆ. ಆದರೆ, ಇದು ರಾಮನ ಲೆಕ್ಕ ಆಯಿತು, ಕೃಷ್ಣನ ಲೆಕ್ಕ ಎಷ್ಟಿದೆ ಹೇಳಿ ಎಂದು ಲೆಕ್ಕ ಹಾಕಿದರೆ ಸುಮಾರು 1,100 ಕೋಟಿ ರೂ ದಾಟುತ್ತದೆ.
ಆದರೆ, ಇನ್ನೊಂದು ಮೂಲದ ಪ್ರಕಾರ ಮಾವ ಎನ್ ಟಿ ರಾಮರಾವ್ ಕಟ್ಟಿದ ಪಕ್ಷದ ತಿಜೋರಿಯಿಂದ ಸ್ವಂತ ಜೇಬಿಗೆ ಇಳಿಸಿದ ಹಣವನ್ನು ಲೆಕ್ಕ ಹಾಕಿದರೆ ನಾಯ್ಡು ಖಜಾನೆಯಲ್ಲಿ ಏನಿಲ್ಲ ಎಂದರೂ 2,000 ಕೋಟಿ ರೂ ಸಿಗುತ್ತದೆ ಎನ್ನಲಾಗಿದೆ.
ಆದರೆ, ಈ ಎಲ್ಲಾ ಅಂದಾಜು ಲೆಕ್ಕವನ್ನು ಆಂಧ್ರಪ್ರದೇಶದ ಕಾಂಗ್ರೆಸ್ ನಾಯಕರು ಬದಿಗೊತ್ತುತ್ತಾರೆ. ಚಂದ್ರಬಾಬು ನಾಯ್ಡು ಆಸ್ತಿಯನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ. ಬೃಹತ್ ಆಸ್ತಿ ಹೊಂದಿರುವ ನಾಯ್ಡು ತುಂಬಾ ಚಾಲಾಕಿ ಆತನನ್ನು ಮೀರಸಲು ನಮ್ಮಿಂದ ಸಾಧ್ಯವಿಲ್ಲ ಎಂದು ಸಚಿವ ಎಸ್ ಶೈಲಜಾನಾಥ್ ಹಾಗೂ ಪಿಸಿಸಿ ವಕ್ತಾರ ಆರ್ ಪದ್ಮರಾಜು ಹೇಳುತ್ತಾರೆ.
ನಾಯ್ಡು ಆಸ್ತಿ ಮೇಲೆ ತನಿಖೆಗೆ ಆದೇಶ ನೀಡಿರುವುದು ಕಾಂಗ್ರೆಸ್ ಸರ್ಕಾರವಲ್ಲ ಹೈಕೋರ್ಟ್ ಎಂಬುದನ್ನು ನಾಯ್ಡು ನೆನಪಿನಲ್ಲಿ ಇಟ್ಟುಕೊಳ್ಳಲಿ. ನಾಯ್ಡು ಅಧಿಕಾರವಧಿಯಲ್ಲಿ ನಡೆಸಿದ ಅಕ್ರಮಗಳ ಬಗ್ಗೆ ತನಿಖೆ ನಡೆಸಿದರೆ ಎಲ್ಲಾ ಹಗರಣಗಳನ್ನು ಮೀರಿಸುತ್ತದೆ. ಕಾಂಗ್ರೆಸ್ ಮೇಲೆ ಬೊಟ್ಟು ಮಾಡಿ ತೋರಿಸುವುದನ್ನು ಬಿಡಲಿ ಎಂದು ಕಾಂಗ್ರೆಸ್ ನಾಯಕರು ಎಚ್ಚರಿಸಿದ್ದಾರೆ.












Click it and Unblock the Notifications