ಈಕೆ ಗಂಡನಿಂದ ದೂರ, ಪೋರ್ನ್ ಎಂಎಂಎಸ್ ಗೆ ಹತ್ತಿರ

ದಿಮಪುರ್, ನ.17: ಅವನಿಗೆ 28 ವರ್ಷ ಅವಳಿಗೆ 30 ದಾಟಿದೆ. ಗಂಡನಿಂದ ವಿಚ್ಛೇದನ ಪಡೆದಿದ್ದಳು. ಅವಳನ್ನು ಬುಟ್ಟಿಗೆ ಹಾಕಿಕೊಂಡಿದ್ದ ಅವನು ಕೊನೆಗೆ ಎಂಎಂಎಸ್ ಮಾಡಿ ಹಂಚಿ ಸಂಭ್ರಮಿಸಿದ್ದ. ಆದರೆ, ಈಗ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ.

ಶೂ ಮಾರಾಟ ಮಳಿಗೆ ಹೊಂದಿರುವ ದೀಪಾಂಕರ್ ರಾಯ್ ಗೆ ಸಿಗ್ನಲ್ ಬಸ್ತಿಯಲ್ಲಿರುವ ಆಂಟಿ ಮೇಲೆ ಕಣ್ಣು ಬಿದ್ದಿತ್ತು. ಗಂಡನಿಂದ ದೂರಾಗಿದ್ದ ಈಕೆಯನ್ನು ಫುಸಲಾಯಿಸಿ, ತೋಳ ತೆಕ್ಕೆಗೆ ಎಳೆದುಕೊಂಡಿದ್ದ.

ತನ್ನ ಮಹತ್ಕಾರ್ಯವನ್ನು ಸೆರೆಹಿಡಿದು ಎಂಎಂಎಸ್ ಮಾಡಿ ಹಂಚಿದ್ದ ಕೂಡಾ. ಈಗ ಪೊಲೀಸರು ಕೇಳಿದರೆ, ಅಯ್ಯೋ ರಾಮ, ಆ ಆಂಟಿ ಒಪ್ಪಿಗೆ ಪಡೆದೇ ನಾನು ಎಂಎಂಎಸ್ ಮಾಡಿದ್ದು, 400 ರೂ ಕೊಡು ಸಾಕು ನಿಂಗೆ ಸುಖ ಕೊಡ್ತೀನಿ ಅಂದ್ಳು ಅದಕ್ಕೆ ಹಾಗೆ ಮಾಡಿದೆ ಎಂದು ಪಿಳಿಪಿಳಿ ಕಣ್ಣು ಬಿಡ್ತಾನೆ.

ತನ್ನ ಅಮಾಯಕತ್ವದ ಕಥೆ ವಿಸ್ತರಿಸುತ್ತಾ... ಒಂದು ದಿನ ನಾನು ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದೆ. ಆಕೆ ನನ್ನನ್ನು ಮನೆಗೆ ಕರೆದಳು. ಪರಿಚಯದ ಹೆಂಗಸು ಎಂದು ಮನೆಗೆ ಹೋದೆ. ಆಮೇಲೆ ನಡೆದಿದ್ದೆ ಬೇರೆ ಎನ್ನುತ್ತಾನೆ.

ರಾಯ್ ನನಗೆ ಒಂದು ವರ್ಷದಿಂದ ಪರಿಚಯ ಇದ್ದಾನೆ ನಿಜ. ಆದರೆ, ಇತ್ತೀಚೆಗೆ ನ್ಯೂ ಸಿಟಿಜನ್ ಹೋಟೆಲ್ ಗೆ ನನ್ನನು ಕರೆದೊಯ್ದಿದ್ದ. ಆ ಸಂದರ್ಭದಲ್ಲಿ ನನ್ನ ನಗ್ನ ಎಂಎಂಎಸ್ ಮಾಡಿರಬಹುದು ನನಗೇನು ಗೊತ್ತಿಲ್ಲ. ಪೊಲೀಸರು ಬಂದು ಪ್ರಶ್ನಿಸಿದಾಗ ಮಾತ್ರ ವಿಷ್ಯ ತಿಳಿಯುತು ಎನ್ನುತ್ತಿದ್ದಾಳೆ.

ಒಟ್ಟಿನಲ್ಲಿ ತಪ್ಪು ಯಾರದ್ದು ಎಂದು ಇನ್ನೂ ಪೊಲೀಸರ ತಲೆಗೆ ಹೊಳೆದಿಲ್ಲ. ದೀಪಾಂಕರ್ ನನ್ನು ಬಂಧಿಸಿ ಐಟಿ ಕಾಯ್ದೆ2008ರ ಸೆಕ್ಷನ್ 67ಎ ಅಡಿಯಲ್ಲಿ ಕೇಸ್ ದಾಖಲಿಸಿಕೊಂಡಿದ್ದಾರೆ. ಆರೋಪ ಸಾಬೀತಾದರೆ ಐದು ವರ್ಷ ಜೈಲು, 10 ಲಕ್ಷ ರೂ ದಂಡ ವಿಧಿಸುವ ಸಾಧ್ಯತೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+