ಶ್ರೀರಾಮುಲು 'ಸೀಲಿಂಗ್ ಫ್ಯಾನ್'ಗೆ ಜೋತುಬಿದ್ದಿದ್ದು ಹೇಗೆ, ಏಕೆ?

ವಾಸ್ತವವಾಗಿ, ಶ್ರೀರಾಮುಲು ನಿಯಮದಂತೆ ಮೂರು ಚಿಹ್ನೆಗಳನ್ನು ಸೂಚಿಸಿದ್ದರು. ಈಗ ಲಭ್ಯವಾಗಿರುವ ಸೀಲಿಂಗ್ ಫ್ಯಾನ್ ಜತೆಗೆ ಗ್ಯಾಸ್ ಸಿಲಿಂಡರ್ ಮತ್ತು ಟೆಲಿವಿಶನ್ ಸೆಟ್ ಸಹ ಇತ್ತು. ಆದರೆ ಶ್ರೀರಾಮುಲುಗೆ 'ಸೀಲಿಂಗ್ ಫ್ಯಾನ್' ಮೇಲೆ ಹೆಚ್ಚು ಒಲವು ಇತ್ತು. ಅದಕ್ಕೆ ಕಾರಣವೂ ಇಲ್ಲದಿಲ್ಲ. ಏನಪಾ ಅಂದರೆ...
ರೆಡ್ಡಿ ಕುಟುಂಬದ ಮತ್ತೊಬ್ಬ ಸಮೀಪವರ್ತಿ, ನೆರೆಯ ಆಂಧ್ರದ ವೈಎಸ್ ಜಗನ್ ಮೋಹನ್ ರೆಡ್ಡಿ ಕಾಂಗ್ರೆಸ್ ವಿರುದ್ಧ ಸಿಡಿದೆದ್ದು ಕಳೆದ ಏಪ್ರಿಲ್ ನಲ್ಲಿ YSR Congress ಪಕ್ಷ ಹುಟ್ಟುಹಾಕಿದಾಗ ಅವರಿಗೂ ಸಹ ಇದೇ 'ಸೀಲಿಂಗ್ ಫ್ಯಾನ್' ಚಿಹ್ನೆ ದಯಪಾಲಿಸಲಾಗಿತ್ತು. ಹೀಗಾಗಿ, ರೆಡ್ಡಿ-ಜಗನ್ ಕುಟುಂಬಗಳೆರಡೂ ವ್ಯಾಪಾರ ವಹಿವಾಟು ವಗೈರೆಗಳಲ್ಲಿ ಒಂದಾಗಿರುವಾಗ ರಾಜಕೀಯದಲ್ಲೂ ಒಂದಾಗಿರೋಣ ಎಂದೆಣೆಸಿ, 'ಸೀಲಿಂಗ್ ಫ್ಯಾನ್' ಗೇ ಜೋತುಬಿದ್ದಿದ್ದಾರೆ.
'ಸೀಲಿಂಗ್ ಫ್ಯಾನ್' ದಕ್ಷಿಣ ಭಾರತದಲ್ಲಿ ಬಿರುಗಾಳಿ ಎಬ್ಬಿಸುತ್ತದಾ?: ಶ್ರೀರಾಮುಲು ಹೀಗೆ ಸೀಲಿಂಗ್ ಫ್ಯಾನ್ ಗೆ ಜೋತುಬಿದ್ದಿರುವ ಸಂದರ್ಭದಲ್ಲಿ 'ನಮ್ಮಣ್ಣ ಜೈಲಿನಿಂದ ಹೊರಕ್ಕೆ ಬರಲಿ. ಇದೇ 'ಸೀಲಿಂಗ್ ಫ್ಯಾನ್' ನಡಿ ಪ್ರಾದೇಶಿಕ ಪಕ್ಷ ಕಟ್ಟಿ ನಮ್ಮ ತಾಖತ್ತು ಏನು ಎಂಬುದನ್ನು ತೋರಿಸುತ್ತೇವೆ' ಎಂದು ಗುಡುಗಿದ್ದಾರೆ.
ರೆಡ್ಡಿ-ಜಗನ್ ಸಂಗಮದಲ್ಲಿ 'ಸೀಲಿಂಗ್ ಫ್ಯಾನ್' ಪಾರ್ಟಿ ದಕ್ಷಿಣ ಭಾರತದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸುತ್ತದಾ? ಕಾಲಾಯತಸ್ಮೈನಮಃ!












Click it and Unblock the Notifications