ಜನನಿಬಿಡ ಪ್ರದೇಶದಲ್ಲಿ ಸ್ತನಕ್ಕೆ ಕೈಹಾಕಿದ ಮ್ಯಾನೇಜರ್ ಬಂಧನ
ಸಿಂಗಾಪುರ,
ನ. 16: ಆಸ್ಟ್ರೇಲಿಯಾದ ಜೇಮ್ಸ್ ಆಂಥೋಣಿ ವುಡ್ ಬರ್ನ್ ಎಂಬ ಮಧ್ಯವಯಸ್ಕನ ಮೇಲೆ 'ಮಹಿಳೆಯ ಸ್ತನಕ್ಕೆ ಕೈಹಾಕಿದ ಸಂಬಂಧ' ಇಲ್ಲಿನ ಜಿಲ್ಲಾ ನ್ಯಾಯಾಲಯದಲ್ಲಿ ಆರೋಪ ದಾಖಲಿಸಲಾಗಿದೆ. id="toptextpromo">ಆಸ್ಟ್ರೇಲಿಯಾದ
ಈ ಪ್ರಜೆ ಜೇಮ್ಸ್ ಆಂಥೋಣಿ ಏನು ಮಾಡಿದ್ದಾನೆ ಅಂದರೆ 28 ವರ್ಷದ ಮಹಿಳೆಯ ಮೊಲೆಗೆ ಕೈಹಾಕಿ ಆಕೆಯ ಮಾನಭಂಗಕ್ಕೆ ಯತ್ನಿಸಿದ್ದಾನೆ. ಅಕ್ಟೋಬರ್ 15ರಂದು ಇಲ್ಲಿನ ಮರೀನಾ ಬೆ ಸ್ಯಾಮನ್ಸ್ ಬಳಿಯಿರುವ ಜನನಿಬಿಡ ಶಾಪಿಂಗ್ ಮಾಲ್ ನಲ್ಲಿ ಮಧ್ಯರಾತ್ರಿ 12.20 ರಲ್ಲಿ ಈ ಮಹಿಳೆಯ ಮೊಲೆಗಳನ್ನು ಹಿಡಿದುಕೊಂಡಿದ್ದಾನೆ. id='are-slot-1' class='oiad oi-axt oiadv'> id='top-searched-articles'>ಮಾರುಕಟ್ಟೆ
ಕಂಪನಿಯೊಂದರ ಪ್ರಾದೇಶಿಕ ಮ್ಯಾನೇಜರ್ ಆಗಿರುವ 44 ವರ್ಷದ ಆರೋಪಿ, ಮಹಿಳೆಯ ಮೊಲೆಗೆ ಕೈಹಾಕುವ ಮುನ್ನ ಪ್ರಚೋದನಕಾರಿಯಾಗಿ ತನ್ನ ಬಲಗೈನ ಮಧ್ಯದ ಬೆರಳನ್ನು ಎತ್ತಿ ತೋರಿಸಿದ ಎಂದೂ ಆರೋಪಿಸಲಾಗಿದೆ. ನ್ಯಾಯಾಲಯವು ಆರೋಪಿಗೆ ಷರತ್ತುಬದ್ಧ ಜಾಮೀನು ನೀಡಿ, ಆತನ ಹೇಳಿಕೆ ದಾಖಲಿಸುವುದಕ್ಕೆ ಕಾಲಾವಕಾಶ ನೀಡಿದೆ.











Click it and Unblock the Notifications