ಬಾಲಕೃಷ್ಣಗೌಡ ವಿರುದ್ಧ 20 ಸಾವಿರ ಪುಟದ ವರದಿ

ವಿವಾದಿತ ಲೋಕಾಯುಕ್ತ ಸಹಾಯಕ ಮಹಾ ನಿರ್ದೇಶಕ ಜೀವನ್‌ಕುಮಾರ್ ಗಾಂವ್ಕರ್ ಅವರ ನೇತೃತ್ವದಲ್ಲಿ ತನಿಖೆ ನಡೆಸಲಾಗಿದೆ. ಸುಮಾರು 20,000 ಪುಟಗಳ ವರದಿ ತಯಾರಾಗಿದೆ.
ಮಾಜಿ ಪ್ರಧಾನಿ ದೇವೇಗೌಡರ ಪುತ್ರ ಎಚ್ ಡಿ ಬಾಲಕೃಷ್ಣ ಅವರ ಬಳಿ ಹತ್ತು ಹೊಸ ಆಸ್ತಿಯ ವಿವರವನ್ನು ಪಡೆದಿರುವುದಾಗಿ ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಆದಾಯಕ್ಕಿಂತಲೂ ಹೆಚ್ಚಿನ ಆಸ್ತಿ ಹೊಂದಿರುವ ಬಾಲಕೃಷ್ಣೇಗೌಡ ವಿರುದ್ಧದ ಬೃಹತ್ ವರದಿ ಸಾಕ್ಷ್ಯಾಧಾರ ಸಹಿತವಾಗಿದೆ. ಕಂದಾಯ ಇಲಾಖೆ, ಆದಾಯ ತೆರಿಗೆ ಇಲಾಖೆ ಮತ್ತು ಬ್ಯಾಂಕುಗಳಿಂದಸಾಕಷ್ಟು ಮಾಹಿತಿ ಸಂಗ್ರಹಿಸಲಾಗಿದೆ.
ಬಾಲಕೃಷ್ಣೇ ಗೌಡ ಅವರ 55 ಆಸ್ತಿಗಳ ಸಂಪೂರ್ಣ ವಿವರಗಳನ್ನು ಸಂಗ್ರಹಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ. ಹೊಸ ಮಾಹಿತಿಗಳು ಲಭ್ಯವಾಗಿರುವ ಹಿನ್ನೆಲೆಯಲ್ಲಿ ತನಿಖೆ ಚುರುಕಾಗಲಿದೆ. ಗಾಂವ್ಕರ್ ಅವರ ವರ್ಗಾವಣೆ ಪ್ರಸಂಗದಿಂದ ತನಿಖೆ ವೇಗ ಸ್ವಲ್ಪ ಕುಂಠಿತವಾಗಿತ್ತು ಎಂಬುದನ್ನು ಪೊಲೀಸರು ಒಪ್ಪಿಕೊಂಡಿದ್ದಾರೆ.
ಪ್ರಕರಣದ ಮುಂದಿನ ವಿಚಾರಣೆಯನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ನ.26ಕ್ಕೆ ಮುಂದೂಡಲಾಗಿದೆ. ಆದರೆ, ಸಂಪೂರ್ಣ ವರದಿ ಸಲ್ಲಿಸಲು ಕನಿಷ್ಠ ಎಂದರೂ ಮೂರು ತಿಂಗಳ ಅವಕಾಶ ಬೇಕಾಗುತ್ತದೆ ಎಂದು ಲೋಕಾಯುಕ್ತ ಪೊಲೀಸರು ಮನವಿ ಮಾಡಿದ್ದಾರೆ.












Click it and Unblock the Notifications