ಇಳಿಯಿತು ಪೆಟ್ರೋಲ್ ಬೆಲೆ, ಮರಳಿತು ಮುಖದಲ್ಲಿ ಕಳೆ

At last petrol price comes down
ನವದೆಹಲಿ, ನ. 15 : ನಿರೀಕ್ಷೆಯಂತೆ ಕೇಂದ್ರ ಸ್ವಾಮ್ಯದ ತೈಲ ಕಂಪನಿಗಳು ಪೆಟ್ರೋಲ್ ದರವನ್ನು ರು.1.85ರಷ್ಟು ಇಳಿಸಿ ನಾಗರಿಕರಲ್ಲಿ ನಗು ಮರಳುವಂತೆ ಮಾಡಿದ್ದಾರೆ. ಹೊಸ ದರಗಳು ಇಂದು (ಮಂಗಳವಾರ) ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿವೆ. ಈಮೊದಲು ಗುರುವಾರ ಪೆಟ್ರೋಲ್ ದರವನ್ನು ಇಳಿಸುವುದಾಗಿ ತೈಲ ಕಂಪನಿಗಳು ಹೇಳಿದ್ದವು.

ದೆಹಲಿಯಲ್ಲಿ ಪೆಟ್ರೋಲ್ ದರದಲ್ಲಿ ರು.2.22ರಷ್ಟು ಕಡಿಮೆಯಾಗಿದೆ. ದೆಹಲಿಯಲ್ಲಿ ರು.68.64 ಇದ್ದ ದರ ಲೀಟರಿಗೆ ರು.66.42 ಆಗಲಿದೆ. ಬೆಂಗಳೂರಿನಲ್ಲಿ ಲೀಟರಿಗೆ ರು.76.79 ಇದ್ದ ದರ ರು.74 ಆಸುಪಾಸು ಆಗಲಿದೆ. ತೈಲ ಕಂಪನಿಗಲು ಇದೇ ತಿಂಗಳು ನ.3ರಂದು ರು.1.80ರಷ್ಟು ದರವನ್ನು ಏರಿಸಿದ್ದವು. ಹೀಗಾದ್ರೆ ಹೇಗಪ್ಪ ಎಂದು ಜನಸಾಮಾನ್ಯರು ತಲೆಮೇಲೆ ಕೈಹೊತ್ತು ಕುಳಿತಿದ್ದರು.

ಈ ಬೆಲೆ ಇಳಿಕೆಯಿಂದಾಗಿ ಮುಂಬೈನಲ್ಲಿ ಲೀಟರ್ ಗೆ ರು.2.34, ಕೋಲ್ಕತಾದಲ್ಲಿ ರು. 2.31 ಮತ್ತು ಚೆನ್ನೈನಲ್ಲಿ ರು.2.35ನಷ್ಟು ಕಡಿಮೆಯಾಗಲಿದೆ. ವ್ಯಾಟ್ ದರವನ್ನು ಇಳಿಸುವ ಅಥವಾ ಕಾಯ್ದುಕೊಳ್ಳುವ ಆಯ್ಕೆಯನ್ನು ಆಯಾ ರಾಜ್ಯಗಳಿಗೆ ಬಿಡಲಾಗಿದೆ. ಕರ್ನಾಟಕದಲ್ಲಿ ವಿಧಿಸಲಾಗುವ ವ್ಯಾಟ್ ಇಡೀ ದೇಶದಲ್ಲೇ ಅಧಿಕ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಇಳಿಕೆಯಾಗಿರುವುದು ಮತ್ತು ಡಾಲರ್‌ಗೆ ವಿರುದ್ಧವಾಗಿ ರುಪಾಯಿ ಮೌಲ್ಯ ವರ್ಧಿಸಿಕೊಂಡಿರುವುದು ಪೆಟ್ರೋಲ್ ಬೆಲೆ ಇಳಿಯಲು ಕಾರಣವಾಗಿದೆ. 2010ರ ಜೂನ್ ನಲ್ಲಿ ಕೇಂದ್ರ ಬೆಲೆ ಏರಿಕೆಇಳಿಕೆಯ ಮೇಲಿನ ನಿಯಂತ್ರಣವನ್ನು ತೈಲ ಕಂಪನಿಗಳಿಗೆ ಬಿಟ್ಟುಕೊಟ್ಟ ನಂತರ ದರ ಕಡಿಮೆಯಾಗಿರುವುದು ಇದೇ ಮೊದಲ ಬಾರಿ.

ನ.3ರಂದು ಮಾಡಿದ ಬೆಲೆ ಏರಿಕೆಯಿಂದಾಗಿ ದೇಶದಾದ್ಯಂತ ಭಾರೀ ಪ್ರತಿಭಟನೆಗಳು ವ್ಯಕ್ತವಾಗಿದ್ದವು. ತೃಣಮೂಲ ಕಾಂಗ್ರೆಸ್ ಯುಪಿಎ ಸರಕಾರಕ್ಕೆ ನೀಡಿದ ಬೆಂಬಲ ವಾಪಸ್ ನೀಡುವುದಾಗಿಯೂ ಬೆದರಿಕೆ ಒಡ್ಡಿತ್ತು. ಆದರೆ, ನ.22ರಿಂದ ಚಳಿಗಾಲದ ಅಧಿವೇಶನ ನಡೆಯುತ್ತಿರುವುದರಿಂದ ಕೇಂದ್ರ ಸರಕಾರವೇ ತೈಲ ಕಂಪನಿಗಳಿಗೆ ಬೆಲೆ ಇಳಿಸಲು ತಾಕೀತು ಮಾಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+