ದೆಹಲಿಯಲ್ಲಿ ಕೆಎಸ್‌ಐಸಿ ಸೀರೆ ಮಳಿಗೆ ಪ್ರಾರಂಭ

ದೆಹಲಿಯ ರೇಷ್ಮೆ ಸೀರೆ ಅಂಗಡಿ ಬಾಬಾ ಖಾರಕ್ ಸಿಂಗ್ ಮಾರ್ಗ್ ನಲ್ಲಿರುವ ಕಾವೇರಿ ಎಂಪೋರಿಯಂನಲ್ಲಿದೆ. ಸೀರೆ ಭಾರತೀಯ ನಾರಿಯರ ಸಾಂಪ್ರದಾಯಿಕ ಉಡುಗೆಯಾಗಿದ್ದು ಅದರಲ್ಲೂ ಕರ್ನಾಟಕದ ಮೈಸೂರು ಸಿಲ್ಕ್ ಸೀರೆ ( KSIC) ವಿಶ್ವಪ್ರಸಿದ್ಧ.
ಟ್ರೇಡ್ ಫೇರ್ : ಭಾರತ ಅಂತರರಾಷ್ಟ್ರೀಯ ವ್ಯಾಪಾರ ಮೇಳ 2011 (IITF)ಇದೀಗ ದೆಹಲಿಯಲ್ಲಿ ನಡೆಯುತ್ತಿದೆ. ಇಲ್ಲಿನ ಕರ್ನಾಟಕದ ವ್ಯಾಪಾರದ ಮಳಿಗೆಗೆ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ವಿ. ಧನಂಜಯ್ ಕುಮಾರ್ ಪ್ರಗತಿ ಮೈದಾನದಲ್ಲಿ ಸೋಮವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕದ ಅಧಿಕಾರಿಗಳಾದ ಕೆ.ಎಸ್ ಶಿವಸ್ವಾಮಿರವರು, ಪ್ರಾದೇಶಿಕ ಆಯುಕ್ತರಾದ ವಂದನಾ ಗುರ್ನಾನಿ, ಬೈಕೆರೆ ನಾಗೇಶ್ ಮುಂತಾದ ಗಣ್ಯರು ಹಾಜರಿದ್ದರು.












Click it and Unblock the Notifications