ದಿನಕ್ಕೆ 10 ಸಾವಿರ ದಂಪತಿ ವಿಚ್ಛೇದನ ಚೀನಾದಲ್ಲಿ ಮಾತ್ರ!

ಪ್ರಸಕ್ತ ವರ್ಷ 28 ಲಕ್ಷಕ್ಕೂ ಅಧಿಕ ದಂಪತಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ ಎಂದು ಅಧಿಕೃತ ಅಂಕಿ ಅಂಶಗಳು ಹೇಳುತ್ತಿದೆ.
ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 12ರಷ್ಟು ಅಧಿಕವಾಗಿದೆ. ಅಂದರೆ ಪ್ರತಿದಿನ 10,000ಕ್ಕೂ ಅಧಿಕ ದಂಪತಿ ಬೇರ್ಪಡುತ್ತಿದ್ದಾರೆ.
ಬೀಜಿಂಗ್ ಹಾಗೂ ಶಾಂಘೈನಂಥ ಪ್ರಥಮ ದರ್ಜೆ ನಗರಗಳಲ್ಲಿ ವಿಚ್ಛೇದನ ಪ್ರಕರಣಗಳು ಶೇ. 30ರ ಪ್ರಮಾಣದಲ್ಲಿ ಏರಿಕೆಯಾಗಿರುವುದು ಆತಂಕಕಾರಿ ವಿಷಯವಾಗಿದೆ.
ಚೀನಾದಲ್ಲಿ ಆರ್ಥಿಕ ಸ್ವತಂತ್ರ ಹೊಂದಿದ ಮಹಿಳೆಯರ ಜೀವನ ಶೈಲಿ ಮತ್ತು ಮೌಲ್ಯಗಳು ಬದಲಾಗಿದೆ. ದಾಂಪತ್ಯ ಕೊಂಚ ಬಿರುಕು ಕಾಣಿಸಿಕೊಂಡರು ವಿಚ್ಛೇದನಕ್ಕೆ ಮುಂದಾಗುತ್ತಿದ್ದಾರೆ ಎನ್ನಲಾಗಿದೆ.












Click it and Unblock the Notifications