ಉದ್ಯೋಗ ಸೃಷ್ಟಿಯಲ್ಲಿ ಮುಂಬೈಗೆ ಸೋತ ಬೆಂಗಳೂರು

ಬೆಂಗಳೂರು ಸಂಸ್ಥೆಗಳಲ್ಲಿ 2011ರ ಜನವರಿ ಮತ್ತು ಸೆಪ್ಟೆಂಬರ್ ಅವಧಿಯಲ್ಲಿ 16,000 ಉದ್ಯೋಗಗಳು ಸೃಷ್ಟಿಯಾಗಿದೆ. ಕಳೆದ ಮೂರು ತಿಂಗಳಲ್ಲಿ 4,500 ಉದ್ಯೋಗ ಸೃಷ್ಟಿಸಲಾಗಿದೆ.
ಆರ್ಥಿಕ ರಾಜಧಾನಿಯಲ್ಲಿ ಮುಂಬೈನಲ್ಲಿ Q3ನಲ್ಲಿ 28,500 ಹೊಸ ನೇಮಕಾತಿಯಾಗಿದೆ. Q4ನಲ್ಲಿ 27,000 ಉದ್ಯೋಗ ಸೃಷ್ಟಿಯ ನಿರೀಕ್ಷೆಯಿದೆ. ಸರಾಸರಿ ಸಂಬಳ ಏರಿಕೆಯಲ್ಲಿ ದೆಹಲಿ ಮುಂದಿದ್ದು ನಂತರದ ಸ್ಥಾನದಲ್ಲಿ ಪುಣೆ, ಚೆನ್ನೈ ಇದೆ.
ಭಾರತದ ಎಂಟು ನಗರಗಳಲ್ಲಿ ಸುಮಾರು 676 ಕಂಪನಿಗಳು ಹಾಗು 13 ಉದ್ಯಮ ವಲಯಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದೆ.
ಮಾನವ ಸಂಪನ್ಮೂಲ ವಿಭಾಗದ ಉನ್ನತ ಮಟ್ಟದ ಅಧಿಕಾರಿಗಳಿಂದ ಮಾಹಿತಿ ಪಡೆದು ತ್ರೈಮಾಸಿಕ ಸಮೀಕ್ಷಾ ವರದಿಯನ್ನು ಮಾಫೋಯ್ ಸಂಸ್ಥೆ ತಯಾರಿಸಿದೆ.












Click it and Unblock the Notifications