ನಾಲ್ಕನೇ ಪ್ರಯತ್ನದಲ್ಲಿ ಮರ್ಡರ್ ಮಾಡಿ ಸಕ್ಸಸ್ ಎಂದ ಶುಭಾ

Lawyer Shubha
ಬೆಂಗಳೂರು, ನ.11: ಶುಭಾ ತನ್ನ ಪ್ರಿಯಕರ ಅರುಣ್ ನನ್ನು ವರಿಸಬೇಕಿದ್ದರೆ, ನಿಶ್ಚಿತಾರ್ಥ ನಂತರ ಭಾವಿಪತಿಗೆ ನನಗೆ ನೀವು ಇಷ್ಟವಿಲ್ಲ ಎನ್ನಬಹುದಿತ್ತು.

ನಾನು ಇನ್ನೊಬ್ಬನನ್ನು ಪ್ರೀತಿಸುತ್ತಿದ್ದೇನೆ ಎಂದು ಒಂದು ಮಾತು ಹೇಳಿದ್ದರೆ ಸಾಕಿತ್ತು. ಅಷ್ಟು ಸಲಿಗೆ ಶುಭಾ ಹಾಗೂ ಗಿರೀಶ್ ಮಧ್ಯೆ ಇತ್ತು. ಚಿಕ್ಕಂದಿನಿಂದ ಪರಸ್ಪರ ಪರಿಚಯವಿದ್ದಿದ್ದರಿಂದ ಶುಭಾಳ ಕೋರಿಕೆಗೆ ಸರಳ ಸ್ವಭಾವ ಗಿರೀಶ್ ಕೂಡಾ ಒಪ್ಪಿರುತ್ತಿದ್ದ ಆದರೆ, ನಿಶ್ಚಿತಾರ್ಥಕ್ಕೆ ಮೊದಲೇ ಮೂರು ಬಾರಿ ಗಿರೀಶ್ ಕೊಲೆಗೆ ಯತ್ನ ನಡೆಸಿದ್ದ ಶುಭಾ ತನ್ನ ಪೈಶಾಚಿಕ ಕೃತ್ಯವನ್ನು ಪೂರೈಸುವ ನಿರ್ಧಾರ ಮಾಡಿಯಾಗಿತ್ತು.

ಪ್ರಾಥಮಿಕ ಹಂತದ ತನಿಖೆಯಲ್ಲೇ ನಾಣಯ್ಯ ಅವರಿಗೆ ಶುಭಾ ಮೇಲೆ ಅನುಮಾನ ಬಂದರೂ ಮೊದಲೇ ಕೊಲೆ ಪ್ರಯತ್ನ ನಡೆದಿತ್ತು ಎಂಬ ಸುಳಿವು ಸಿಕ್ಕಿರಲಿಲ್ಲ. ಗಿರೀಶ್ ಕಂಪನಿ ಟೈಮಿಂಗ್ಸ್, ಚಲನವಲನದ ಮೇಲೆ ನಿಗಾವಹಿಸಿದ್ದ ಶುಭಾ ಎಲ್ಲಾ ಮಾಹಿತಿಯನ್ನು ತನ್ನ ಸಹಪಾಠಿ ಪ್ರಿಯಕರ್ ಆರುಣ್ ಗೆ ವರ್ಗಾಯಿಸಿದ್ದಳು.

ಆದರೆ, ಮೂರು ಬಾರಿ ಕೂಡಾ ಗಿರೀಶ್ ತಪ್ಪಿಸಿಕೊಂಡಿದ್ದ. ಸಾಮಾನ್ಯವಾಗಿ ಗಿರೀಶ್ ಏಕಾಂಗಿಯಾಗಿ ಓಡಾಡುತ್ತಿದ್ದದ್ದು ಕಮ್ಮಿ. ಎಲ್ಲೆ ಹೋದರೂ ಫ್ಯಾಮಿಲಿ ಜೊತೆ ಇರುತ್ತಿತ್ತು.

ಕೊಲೆ ಮಾಡಲು ಡಿ.3. 2003ರ ರಾತ್ರಿಯನ್ನು ಶುಭಾ ಅಂಡ್ ಗ್ಯಾಂಗ್ ಅ ಆಯ್ದುಕೊಂಡಿತ್ತು. ಬಲವಂತವಾಗಿ ಗಿರೀಶ್ ನನ್ನು ಡಿನ್ನರ್ ಗೆ ಕರೆದೊಯ್ದ ಶುಭಾ ತನ್ನ ಕಾರ್ಯ ಪೂರೈಸಿದ್ದಳು.

ಕೊಲೆ ನಂತರ ವಿದೇಶಕ್ಕೆ ಎಸ್ಕೇಪ್ ಆಗುವ ಪ್ಲ್ಯಾನ್ ಮಾಡಿದ್ದರೂ, ಕ್ರಿಮಿನಲ್ ವಕೀಲ ಸಿವಿ ನಾಗೇಶ್ ಅವರು ಬೇಲ್ ಕೊಡಿಸುತ್ತಾರೆ ನಂತರ ಎಲ್ಲಾದರೂ ಹೋಗು ಎಂದು ಆಪ್ತರ ಸಲಹೆಗೆ ಒಪ್ಪಿದ್ದಳು. ಆದರೆ, ಶುಭಾಗೆ ಬೇಲ್ ಸಿಗಲಿಲ್ಲ. ನೀರಜ್ ಗ್ರೋವರ್ ನನ್ನು ಕತ್ತರಿಸಿಕೊಂದ ಮರಿಯಾ ಮೋನಿಕಾ ಸುಸೈರಾಜ್ ಗೆ ಸಿಕ್ಕ ಬೇಲ್ ಶುಭಾ ಸಿಗಲಿಲ್ಲ ವಕೀಲೆ ಮತ್ತೆ ಕಾರಾಗೃಹದಲ್ಲಿ ಮೌನಯುದ್ಧ ನಡೆಸುತ್ತಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+